ಚಂದ್ರವಳ್ಳಿ ನ್ಯೂಸ್, ಕೋಲಾರ:
ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ ಗಳ ತೆರಿಗೆ ವಂಚನೆಯನ್ನು ಬಯಲಿಗೆಳೆದಿರುವ ಘಟನೆ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಗಡಿಭಾಗದ ಎನ್.ಜಿ. ಹುಲ್ಕೂರು ಗ್ರಾಮದ ಬಳಿ ಜರುಗಿದೆ.
ಆಂಧ್ರಪ್ರದೇಶದಿಂದ ಬರುತ್ತಿದ್ದ ಖಾಸಗಿ ಬಸ್ಸನ್ನು ತಪಾಸಣೆ ನಡೆಸಿದಾಗ, ಒಂದೇ ವಾಹನಕ್ಕೆ ಎರಡು ಬೇರೆ ಬೇರೆ ನೋಂದಣಿ ಸಂಖ್ಯೆಗಳಿರುವುದು ಪತ್ತೆಯಾಗಿದೆ. ಬಸ್ನ ಹಿಂಭಾಗದಲ್ಲಿ ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಇದ್ದರೆ,
ಮುಂಭಾಗದಲ್ಲಿ ಮಂಗಳೂರಿನ ನೋಂದಣಿ ಸಂಖ್ಯೆ ಪ್ರದರ್ಶಿಸಲಾಗಿತ್ತು. ಅಲ್ಲದೆ, ಬಸ್ನ ಚಾಸಿ ಸಂಖ್ಯೆ ಪರಿಶೀಲಿಸಿದಾಗ ಅದು ಮೈಸೂರಿನ ನೋಂದಣಿಗೆ ಸಂಬಂಧಿಸಿದೆ ಎಂಬುದು ತಿಳಿದುಬಂದಿದೆ.
ಬಾಗೇಪಲ್ಲಿಯ ವೈ.ಜಿ.ಎಸ್ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ಬಸ್ ತೆರಿಗೆ ವಂಚನೆ ಮಾಡಿ ಸಂಚರಿಸುತ್ತಿದ್ದ ಹಿನ್ನೆಲೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್ಸನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

