ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ-ಡಿಕೆ ಶಿವಕುಮಾರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ ಎನ್ನುವ ಡಿಕೆ ಶಿವಕುಮಾರ್ ಅವರು ತನ್ನ ಎಕ್ಸ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುವ ಈ ವಾಕ್ಯ ಹಲವು ಗೂಡಾರ್ಥಗಳನ್ನ ನೀಡುತ್ತಿದೆ.
ಮೈಸೂರಿನಲ್ಲಿ ಮಂಗಳವಾರವಷ್ಟೇ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನ ಭೇಟಿ ಮಾಡಿ ಬಂದಿದ್ದರು. ಈ ಸಂದರ್ಭದಲ್ಲಿ ನಗುತ್ತಲೇ ಟಾಟಾ ಮಾಡುತ್ತಾ ಕಾರು ಏರಿ ಹೊರಟಿದ್ದರು. ಈಗ ಡಿಕೆ ಶಿವಕುಮಾರ್ ಹಾಕಿರುವ ಪೋಸ್ಟ್  ಹಲವು ಅರ್ಥಗಳನ್ನ ನೀಡುತ್ತಿದೆ.

ಪ್ರಯತ್ನಗಳು ವಿಫಲವಾಗಬಹುದು, ಆದರೆ ಪ್ರಾರ್ಥನೆಗಳು ಎಂದಿಗೂ ವಿಫಲವಾಗುವುದಿಲ್ಲ ಎಂಬ ಸಂದೇಶ ಉಳ್ಳ ಪೋಸ್ಟರ್​ ಅನ್ನು ಎಕ್ಸ್​ ಪೋಸ್ಟ್​ ನಲ್ಲಿ ಹಂಚಿಕೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕತ್ವವು ಸಂಕ್ರಾಂತಿ ಹಬ್ಬದ ನಂತರ ನಾಯಕತ್ವದ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಕರೆಯಲಿದೆ ಎಂಬ ಬಲವಾದ ವದಂತಿಗಳ ನಡುವೆ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಶಿವಕುಮಾರ್ ಅವರ ಪಾಳಯವು ಶುಭ ಸುದ್ದಿ ಪಡೆಯುವ ಭರವಸೆಯಲ್ಲಿದೆ. ಶಿವಕುಮಾರ್ ಅವರ ಆಪ್ತ ಮೂಲಗಳು ರಾಹುಲ್ ಗಾಂಧಿ ಅವರು ಚಿಂತಿಸಬೇಡಿ ಎಂದು ಭರವಸೆ ನೀಡಿದ್ದಾರೆ ಮತ್ತು ಅವರನ್ನು ಶೀಘ್ರದಲ್ಲೇ ದೆಹಲಿಗೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಆಪ್ತ ಮೂಲಗಳಿಂದ ಹರಿದಾಡುತ್ತಿವೆ.

- Advertisement - 

ಈ ಭರವಸೆಯಿಂದ ಉತ್ತೇಜಿತರಾದ ಶಿವಕುಮಾರ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿವೆ. ಈ ತಿಂಗಳ ಅಂತ್ಯದಲ್ಲಿ ನಿರ್ಣಾಯಕ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಹುಲ್ ಗಾಂಧಿ ನಡುವೆ ವಿಮಾನ ನಿಲ್ದಾಣದಲ್ಲಿ ನಡೆದ ಪ್ರತ್ಯೇಕ ಸಂಭಾಷಣೆಯು ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವದ ತಿಕ್ಕಾಟದ ನಡುವೆ ಊಹಾಪೋಹಗಳಿಗೆ ಕಾರಣವಾಗಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ
, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಮತ್ತು ಒಟ್ಟಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.

- Advertisement - 

ರಾಹುಲ್ ಗಾಂಧಿಯವರು ಮಂಗಳವಾರ ವಿಮಾನ ನಿಲ್ದಾಣಕ್ಕೆ ಬಂದಿಳಿದು ಹೋದರು. ಮೊದಲು ಗುಡಲೂರಿಗೆ ಹೋಗುವಾಗ ಮತ್ತು ನಂತರ ನವದೆಹಲಿಗೆ ಹಿಂತಿರುಗುವಾಗ ರಾಹುಲ್​ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಎರಡೂ ಬಾರಿಯೂ ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು. ಏನು ಮಾತುಕತೆ ನಡೆದಿದೆ ಎಂಬುದರ ಮಾಹಿತಿ ಇಲ್ಲ.

ಈ ಮೂವರ ನಡುವೆ ಯಾವೆಲ್ಲ ಮಾತುಕತೆಗಳು ನಡೆದವು ಎಂಬ ಬಗ್ಗೆ ಸ್ಪಷ್ಟವಾಗಿ ಏನೂ ತಿಳಿದಿಲ್ಲವಾದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಸಿಎಂ ಗಾದಿ ಗುದ್ದಾಟದ ಬಗ್ಗೆ ಊಹಾಪೋಹಗಳು ರಾಜ್ಯಾದ್ಯಂತ ಹರಿದಾಟುತ್ತಿವೆ. ಮತ್ತೊಂದು ಕಡೆ ಸಂಪುಟ ಪುನರ್​​ ರಚನೆಯ ಸಾಧ್ಯತೆಯೂ ಇದೆ. ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟ ಪುನರ್ರಚನೆಗೆ ಒತ್ತಾಯಿಸುತ್ತಿದ್ದರೂ ಪಕ್ಷದ ಮೂಲಗಳ ಪ್ರಕಾರ, ನಾಯಕತ್ವ ಬದಲಾವಣೆಯ ಬಗ್ಗೆ ಪಕ್ಷವು ಮೊದಲು ನಿರ್ಧರಿಸಬೇಕು ಎಂಬುದು ಶಿವಕುಮಾರ್ ಅವರ ಬಯಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಮೂಲಗಳು:
ಕಾಂಗ್ರೆಸ್ ಹೈಕಮಾಂಡ್ ಸಂಪುಟ ಪುನರ್ರಚನೆಯನ್ನು ಅನುಮೋದಿಸಿದರೆ
, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಪಕ್ಷದ ಆಂತರಿಕ ಮೂಲಗಳ ಅಭಿಪ್ರಾಯವಾಗಿದೆ. ಇದು ಶಿವಕುಮಾರ್ ಅವರು ಅಪೇಕ್ಷಿತ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಎನ್ನುವ ಸೂಚನೆ ನೀಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೆಲ ಕಾಂಗ್ರೆಸ್ ನಾಯಕರ ಪ್ರಕಾರ, ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರದಲ್ಲಿರುವ ಎರಡು ದೊಡ್ಡ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಿರ್ಧರಿಸುವಾಗ, ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳನ್ನು ಸಹ ಪಕ್ಷವು ಮನಸ್ಸಿನಲ್ಲಿಟ್ಟುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಸರ್ಕಾರವು ನವೆಂಬರ್ 20 ರಂದು ಎರಡೂವರೆ ವರ್ಷಗಳ ಪೂರ್ಣಗೊಳಿಸಿದೆ. ಆ ಬಳಿಕ ಮುಖ್ಯಮಂತ್ರಿ ಬದಲಾವಣೆಯ ಸಾಧ್ಯತೆಯ ಚರ್ಚೆಗಳು ವ್ಯಾಪಕಗೊಂಡಿವೆ. ಈ ನಡುವೆ ಆಡಳಿತ ಪಕ್ಷದೊಳಗಿನ ನಾಯಕತ್ವ ಬದಲಾವಣೆಯ ವಿಚಾರವು ತೀವ್ರಗೊಂಡಿದೆ ಎಂಬ ಚರ್ಚೆಗಳು ಮುನ್ನಲೆಯಲ್ಲಿವೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ 2023ರಲ್ಲಿ ಸರ್ಕಾರ ರಚನೆಯ ಸಮಯದಲ್ಲಿ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದಿಂದ ಈ ಊಹಾಪೋಹಕ್ಕೆ ಉತ್ತೇಜನ ಸಿಕ್ಕಿದೆ.

ಊಹಾಪೋಹ ತಳ್ಳಿ ಹಾಕಿದ ಸಿಎಂ:
ರಾಜ್ಯದ ನಾಯಕತ್ವದಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಮಾಧ್ಯಮಗಳ ಊಹಾಪೋಹಗಳನ್ನು ಸಿದ್ದರಾಮಯ್ಯ ಅವರು ಮತ್ತೆ ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ರಾಹುಲ್​ ಗಾಂಧಿಯವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದ ವಿಷಯಗಳ ಬಗ್ಗೆ ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದರು.

ಸಭೆಯಲ್ಲಿ ಗಾಂಧಿಯವರೊಂದಿಗೆ ಯಾವುದೇ ರಾಜಕೀಯ ಚರ್ಚೆಗಳನ್ನು ನಡೆಸಲಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದರು.

ದೇವರಾಜ್ ಅರಸ್ ಅವರ ದಾಖಲೆಯನ್ನು ಕಳೆದ ವಾರ ಮುರಿದಿದ್ದರು, ರಾಜ್ಯದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ, ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಅಂತಿಮ ನಿರ್ಧಾರವು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಅವರು ಮತ್ತೆ ಮತ್ತೇ ಸ್ಪಷ್ಟಪಡಿಸಿದ್ದಾರೆ.

Share This Article
error: Content is protected !!
";