ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ವರ್ಷದ ಮೊದಲನೇ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಬೆಂಗಳೂರು ಗ್ರಾಮಾಂತರ ಹಾಗೂ ತಾಲೂಕು ಘಟಕದ ಜೆಡಿಎಸ್ ಮುಖಂಡರು ಗೋಪೂಜೆ, ರಾಶಿ ಪೂಜೆ ಮಾಡುವ ಮೂಲಕ ಸ್ವಾಗತಿಸಿದರು.
ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡ ಸೇರಿದಂತೆ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಒಟ್ಟಾಗಿ ಗೋ ಪೂಜೆ ಸಲ್ಲಿಸಿ ಎಳ್ಳು ಬೆಲ್ಲ ಹಂಚಿ ಸಂಕ್ರಾಂತಿ ಹಬ್ಬಕ್ಕೆ ಶುಭಾಶಯ ಕೋರಿದರು.
ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ ಮಾತನಾಡಿ ರೈತರು ಕಷ್ಟಪಟ್ಟು ದುಡಿದ ಫಸಲನ್ನು ಒಂದೆಡೆ ಸೇರಿಸಿ ರಾಶಿ ಪೂಜೆ ಮಾಡುವ ಮೂಲಕ ಜೊತೆಗೆ ತಮಗಾಗಿ ದುಡಿದ ಎತ್ತು ಹೋರಿಗಳಿಗೆ ಗೋಪೂಜೆ ಮಾಡುವ ಮೂಲಕ ರೈತರು ಅತ್ಯಂತ ಸಂತೋಷದಿಂದ ಆಚರಿಸುವ ಹಬ್ಬವೆಂದರೆ ಅದು ಸಂಕ್ರಾಂತಿ ಹಬ್ಬ . ಇಂದು ನಾವೆಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸುವ ಮೂಲಕ ಜೆಲ್ಲೆ ಹಾಗೂ ತಾಲೂಕಿನ ರೈತರಿಗೆ ಮುಂದಿನ ವರ್ಷವೂ ಉತ್ತಮ ಬೆಳೆ ಬರುವ ಮೂಲಕ ರೈತರ ಸಮೃದ್ಧಿ ಹೆಚ್ಚಲಿ ಎಂದು ಹಾರೈಸಿದ್ದೇವೆ ಎಂದರು.
ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ ಮಳೆ ಗಾಳಿ ಎನ್ನದೆ ರೈತರು ಪಡುವ ಕಷ್ಟಕ್ಕೆ ಸಿಗುವ ಪ್ರತಿಫಲಕ್ಕೆ ತನ್ನ ಮನಸ್ಸಿಗೆ ಇಷ್ಟವಾಗುವಂತೆ ಪೂಜೆ ಸಲ್ಲಿಸಿ ಮುಂದಿನ ವರ್ಷವೂ ನಮ್ಮ ಬೆಳೆ ನಮ್ಮ ವ್ಯವಸಾಯ ಉತ್ತಮವಾಗಿರಲಿ ಎಂದು ಬೇಡಿಕೊಳ್ಳುವ ಹಬ್ಬ ಇದಾಗಿದೆ ಈ ಬಾರಿ ತಾಲೂಕಿನ ರೈತರಿಗೆ ಉತ್ತಮ ಬೆಳೆಯಾಗಿದ್ದು ಮುಂದಿನ ವರ್ಷವೂ ಉತ್ತಮ ಮಳೆ ಬೆಳೆಯಾಗಲಿ ಎಂದು ಹಾರೈಸಿದರು.

ಈ ವೇಳೆ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್ (ವಡ್ಡರಹಳ್ಳಿ ರವಿ),ಮುಖಂಡರಾದ ಕುಂಟನಹಳ್ಳಿ ಮಂಜುನಾಥ್, ನಾಗರಾಜ್, ರಾಜಘಟ್ಟ ಹರೀಶ್, ಆಶಾ ಗೌಡ, ಶಿವಕುಮಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

