ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಳಕ್ಕೆ ಮುಂದಾಗ ಸರ್ಕಾರ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಶಾಲೆಗಳಲ್ಲಿ ನಾನಾ ಕಾರಣಗಳಿಂದ ಮಕ್ಕಳ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. ಮಕ್ಕಳ ದಾಖಲಾತಿ ಇಳಿಕೆಗೆ ಪ್ರಮುಖವಾಗಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚುತ್ತಿರುವುದು ಇಳಿಕೆಗೆ ಕಾರಣವಾಗಿದ್ದು ಶಿಕ್ಷಣ ಇಲಾಖೆ ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿದೆ.

ಒಂದೇ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ 2.25 ಲಕ್ಷದಷ್ಟು ಕಡಿಮೆ ಆಗಿರೋದು ಗಂಭೀರವಾಗಿದ್ದು ಇದರ ಬೆನ್ನಲ್ಲೇ ಇಲಾಖೆ ಅಲರ್ಟ್​​ ಆಗಿದೆ. ಏನಿದು ಹೊಸ ಯೋಜನೆ?

- Advertisement - 

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರ ಈಗಾಗಲೇ ಉಚಿತವಾಗಿ ಪುಸ್ತಕ, ಶೂ, ಬಟ್ಟೆ ಮತ್ತು ಮಧ್ಯಾಹ್ನದ ಊಟ ನೀಡುತ್ತಿದೆ. ಇದರ ಜೊತೆಗೆ ಇನ್ಮುಂದೆ ಓರ್ವ ವಿದ್ಯಾರ್ಥಿಗೆ 6 ನೋಟ್​​ ಬುಕ್​​ಗಳು, ವಾರದ ಐದು ದಿನ ಮೊಟ್ಟೆ ವಿತರಣೆ ಮಾಡಲಿದೆ. ಜನವರಿಯಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭದ ಜೊತೆಗೆ ಯಾವುದೇ ಶುಲ್ಕಗಳು ಇಲ್ಲದಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಲು ಕ್ಯಾಂಪೇನ್​​ನ ​​ ಕೂಡ ಇಲಾಖೆ ಆರಂಭಿಸಿದೆ.

ಅಧಿವೇಶನದಲ್ಲಿ ರಾಜ್ಯ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 188 ಸರ್ಕಾರಿ ಶಾಲೆಗಳಲ್ಲಿ ಒಂದೂ ಪ್ರವೇಶವಾಗಿಲ್ಲ. ಇದರಲ್ಲಿ 160 ಕಿರಿಯ ಪ್ರಾಥಮಿಕ ಶಾಲೆಗಳು, 25 ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು 3 ಪ್ರೌಢಶಾಲೆಗಳಿವೆ.
ತುಮಕೂರು ಜಿಲ್ಲೆಯಲ್ಲಿ
45 ಶಾಲೆಗಳು ಸೇರಿದಂತೆ ಕಲಬುರಗಿ 21, ಕೋಲಾರ 20, ಕೊಪ್ಪಳ 18 ಮತ್ತು ಬೀದರ್​​ನಲ್ಲಿ 17 ಶಾಲೆಗಳು ಶೂನ್ಯ ದಾಖಲಾತಿ ಹೊಂದಿವೆ.

- Advertisement - 

ಏಕೋಪಾಧ್ಯಾಯ ಶಾಲೆಗಳು:
ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 2018ರಲ್ಲಿ 3,450 ಇದ್ದು 2025-26ನೇ ಸಾಲಿನಲ್ಲಿ 6,675ಕ್ಕೆ ಏರಿಕೆ ಕಂಡಿದೆ. 1ರಿಂದ 5ನೇ ತರಗತಿವರೆಗೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರಾದರೂ ಇರಬೇಕು ಅಥವಾ ಕನಿಷ್ಠ 12 ಮಕ್ಕಳಿದ್ದರೆ ಇಬ್ಬರು ಶಿಕ್ಷಕರಿರಬೇಕೆಂಬ ನಿಯಮ ಇದೆ.

ಆದರೆ ಶಿಕ್ಷಕರ ಸಂಖ್ಯೆಯ ಕೊರತೆಯ ಕಾರಣ ಈ ನಿಯಮ ಪಾಲನೆ ಆಗುತ್ತಿಲ್ಲ. ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, 2028ರವೇಳೆಗೆ ಇನ್ನೂ 28 ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ ಎನ್ನಲಾಗಿದೆ.

Share This Article
error: Content is protected !!
";