ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆ ಖಾಸಗಿ ಸಂಸ್ಥೆಯವರ ವಾಹನಗಳ ಮೇಲೆ ಅವರ ಕಂಪನಿಗಳಿಗೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತು ಫಲಕಗಳ ಪ್ರಕಟಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಅನುಮೋದನೆ ನೀಡಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಕಾರ್ಯಸೂಚಿಯಲ್ಲಿ ಒಟ್ಟು 56 ವಿಷಯಗಳು ಮಂಡನೆಯಾಗಿದ್ದು, ಅವುಗಳಲ್ಲಿ ಮೂರು ವಿಷಯಗಳು ವಾಹನಗಳ ಮೇಲೆ ಜಾಹಿರಾತು ಪ್ರಚುರಪಡಿಸಲು ಅರ್ಜಿ ಮಂಡಣೆಯಾಗಿದ್ದು, ಅದರಲ್ಲಿ ಚಿತ್ರದುರ್ಗ ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಇತರೆಯವರು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಂಸ್ಥೆಯ ವಾಹನಗಳ ಮೇಲೆ ಜಾಹಿರಾತು ಫಲಕ ಪ್ರಕಟಿಸಲು ಕೋರಿದ್ದು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯು ಮಧ್ಯಮವರ್ಗದ ವಾಹನಗಳಿಗೆ ರೂ.750/-, ಭಾರಿ ಸರಕು ಸಾಗಾಣಿಕೆ ವಾಹನಗಳಿಗೆ ರೂ.2000/- ಶುಲ್ಕವನ್ನು ವಿಧಿಸಿ, ನಿರ್ಣಯ ಕೈಗೊಂಡು ಸಭೆಯು ಅನುಮೋದನೆ ನೀಡಿತು.
19 ರಹದಾರಿ ವರ್ಗಾವಣೆ ವಿಷಯಗಳಲ್ಲಿ ಸಾಮಾನ್ಯ ವರ್ಗಾವಣೆ ವಿಷಯಗಳು 16 ಹಾಗೂ 03 ಮರಣೋತ್ತರ ರಹದಾರಿ ವರ್ಗಾವಣೆ ವಿಷಯಗಳಿದ್ದು, ಪ್ರಾಧಿಕಾರವು ರಹದಾರಿದಾರರ ಪರ ವಕೀಲರ ಅಹವಾಲಗಳನ್ನು ಆಲಿಸಿ, ಸಭೆಯು ಅನುಮೋದಿಸಿತು.
33 ರಹದಾರಿ ವೆತ್ತ್ಯೇಯ ವಿಷಯಗಳಲ್ಲಿ 15 ವಿಷಯಗಳು ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಕಡಿತ ವಿಷಯಗಳಾಗಿದ್ದು, ಮಜಲು ವಾಹನ ರಹದಾರಿದಾರರ ಪರ ವಕೀಲರ ಅಹವಾಲು ಹಾಗೂ ಲಿಖಿತ ಅಹವಾಲಗಳನ್ನು ಇದೇ ಜನವರಿ 31 ರವರೆಗೆ ಸಲ್ಲಿಸಲು ಕಾಲಾವಕಾಶ ನೀಡಿ ನಂತರ ಕಾನೂನಾತ್ಮಾಕವಾಗಿ ವಿಷಯದಾರಿತವಾಗಿ ಕ್ರಮ ವಹಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
17 ವೇಳಾಪಟ್ಟಿ ವೆತ್ಯೇಯ ವಿಷಯಗಳನ್ನು ಕಾರ್ಯದರ್ಶಿಯವರಿಗೆ ವೇಳಾಪಟ್ಟಿ ಸಭೆ ಜರುಗಿಸಿ ಇತರೆ ಸಹ ಖಾಸಗಿ ಪ್ರವರ್ತಕರ ಅಹವಾಲು ಆಲಿಸಿ ಪರಿಶೀಲಿಸಿ ವೇಳಾಪಟ್ಟಿ ನಿಗಧಿಪಡಿಸುವಂತೆ ಕಾರ್ಯದರ್ಶಿಯವರಿಗೆ ಸೂಚಿಸಿ, ನಿರ್ಣಯಿಸಲಾಯಿತು.
ವೆತ್ಯೇಯ ವಿಷಯಗಳಲ್ಲಿ ಒಂದು ವಿಷಯದಲ್ಲಿ ರಹದಾರಿದಾರರು ಅರ್ಜಿ ಹಿಂಪಡೆಯಲು ತಮ್ಮ ಪರ ವಕೀಲರ ಮುಖಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಕೋರಿದ್ದರನ್ವಯ ಅರ್ಜಿ ಹಿಂಪಡೆಯಲು ಸಭೆಯು ಅನುಮೋದಿಸಿತು.
ಖಾಸಗಿ ಬಸ್ಸು ಮಾಲೀಕರ ಸಂಘದವರು ರಹದಾರಿ ವರ್ಗಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮೋಟಾರು ವಾಹನ ನಿಯಮಗಳ ಅನುಸಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಅಧಿಕಾರವನ್ನು ಪ್ರದತ್ತ ಮಾಡಲು ಸಾರಿಗೆ ಪ್ರಾಧಿಕಾರಕ್ಕೆ ಕೋರಿದ್ದರ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಅವರಿಗೆ ಮರಣೋತ್ತರ ರಹದಾರಿ ವರ್ಗಾವಣೆ ಅಧಿಕಾರವನ್ನು ನಿಯಮಾನುಸಾರ ಪ್ರದತ್ತ ಮಾಡಲು ಸಭೆಯು ನಿರ್ಧರಿಸಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಕಾರ್ಯದರ್ಶಿ ಭರತ ಎಂ ಕಾಳಿಸಿಂಗೆ ಹಾಗೂ ಪ್ರಾದೇಶಿಕ ಸಾರಿಗೆ ಕಛೇರಿ ಅಧೀಕ್ಷಕ ಸಿ.ಡಿ.ಹೇಮಂತ್ಕುಮಾರ್ ಹಾಗೂ ಬಸ್ಸು ಮಾಲೀಕರ ಸಂಘದ ಪದಾಧಿಕಾರಿಗಳು, ಉಚ್ಛó ನ್ಯಾಯಾಲಯದಿಂದ ಆಗಮಿಸಿದ್ದ ವಕೀಲರುಗಳು ಹಾಗೂ ಕೆಎಸ್ಆರ್ಟಿಸಿ ಸಂಸ್ಥೆಯ ಪರ ಕಾನೂನು ಅಧಿಕಾರಿಗಳು ಉಪಸ್ಥಿತರಿದ್ದರು.

