ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಿಂದೂ ಸಂಗಮ ಆಯೋಜನ ಸಮಿತಿಯಿಂದ ಜ.೧೮ ರಂದು ಮಧ್ಯಾಹ್ನ ೩ ಕ್ಕೆ ವಿ.ಪಿ.ಬಡಾವಣೆ ೩ ನೇ ಕ್ರಾಸ್ನಿಂದ ಶೋಭಾಯಾತ್ರೆ ಹೊರಡಲಿದೆ.
ಜೆ.ಸಿ.ಆರ್ ಗಣಪತಿ ದೇವಸ್ಥಾನ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಹೊಳ್ಳ ಭಾಗವಹಿಸುವರೆಂದು ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ನವೀನ್ ಚಾಲುಕ್ಯ ತಿಳಿಸಿದ್ದಾರೆ.

