ಮರೆತು ನನ್ನ ತೊರೆದು ಹೋದೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮರೆತು ನನ್ನ ತೊರೆದು ಹೋದೆ

ಒಲವಿನ ಓಲೆಯ ಬರೆದೆ ನಿನಗೆ
ವಿಷದ ಹಾಲನು ಉಣಿಸಿದೆ ನನಗೆ
ಪ್ರೀತಿಯ ಹಾಡನು ಹಾಡಲಿ ಹೇಗೆ
ಮುಳ್ಳಿನ ಹಾಸಿದು ಬದುಕಿನ ಬೇಗೆ  llll

- Advertisement - 

ಕಂಡ ಕನಸು ಬರಿದಾದ ಮೇಲೆ
ಕೊಟ್ಟ ಭರವಸೆ ಹುಸಿಯಾದ ಮೇಲೆ
ಮತ್ತೆ ಚಿಗುರುವ ಕನಸ್ಸಿನ್ನೆಲ್ಲಿ
ಬಾಡಿಹೋಗಿದೆ ಮನ ಸೊರಗಿ ಹೋಗಿದೆ llll

ಮರೆತು ನನ್ನ ತೊರೆದು ಹೋದೆ
ಅರಿಯುವ ಮುನ್ನ ಮುರಿದುಹೋದೆ
ಮತ್ತೆ ಕಟ್ಟುವ ಮಾತಿನ್ನೆಲ್ಲಿ
ಸುಟ್ಟುಹೋಗಿದೆ ಮನ ಕದಡಿ ಹೋಗಿದೆ llll

- Advertisement - 

ಒಡೆದು ಕನ್ನಡಿ ಚೂರು ಮಾಡಿ
ಸುರಿದೆ ಮೇಲೆ ನಗೆಯ ಬೀರಿ
ನೆಮ್ಮದಿ ಬಾಳು ಹುಡುಕಲಿ ಎಲ್ಲಿ
ಮಾಯವಾಗಿದೆ ಸುಖ ಶಾಂತಿಯು ದೂರವಾಗಿದೆ llll
ಕವಿತೆ:ವೆಂಕಟೇಶ.ಹೆಚ್, ಚಿತ್ರದುರ್ಗ (ನವ ದೆಹಲಿ).7760023887

 

 

Share This Article
error: Content is protected !!
";