ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಕಚೇರಿಗಳ ಮೇಲೆ ಈಗ ‘ಕಲೆಕ್ಷನ್ ಸೆಂಟರ್‘ಎಂಬ ಬೋರ್ಡ್ ಹಾಕುವ ಸಮಯ ಬಂದಿದೆ ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ಆಡಳಿತದಲ್ಲಿ ಕಮಿಷನ್ ದಂಧೆ ತಹಶೀಲ್ದಾರ್ ಕಚೇರಿಗಳಲ್ಲಿ ಬಹಿರಂಗವಾಗಿ ನಡೆಯುತ್ತಿದೆ! ಕಲಬುರಗಿ ಜಿಲ್ಲೆಯ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರು ತಮ್ಮ ಕೆಳಹಂತದ ಸಿಬ್ಬಂದಿಯ ಮೇಲೆ ಬಹಿರಂಗವಾಗಿ ‘ಹಫ್ತಾ‘ ವಸೂಲಿಗೆ ಒತ್ತಡ ಹೇರುತ್ತಿದ್ದಾರೆ.
ಅಧಿಕಾರಿಗಳನ್ನೇ ವಸೂಲಿ ಏಜೆಂಟ್ ಗಳನ್ನಾಗಿ ಮಾಡಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿ ತಿಂಗಳು ಹೋಗುತ್ತಿರುವ ಪಾಲು ಎಷ್ಟು? ಎಂದು ಬಿಜೆಪಿ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಸಿಎಂ ಸಿದ್ದರಾಮಯ್ಯನವರೇ, ವಿಧಾನಸೌಧದ ಗದ್ದುಗೆಯಿಂದಲೇ ಈ ‘ಹಫ್ತಾ‘ ಆರ್ಡರ್ ಬಂದಿದೆಯೇ? ಅಧಿಕಾರಿಗಳೇ ಕಲೆಕ್ಷನ್ ಏಜೆಂಟ್ ಆಗಿ ಬದಲಾಗಿರುವ ಈ ದಂಧೆಯಲ್ಲಿ ಸರ್ಕಾರಕ್ಕೆ ತಲುಪುತ್ತಿರುವ ಪಾಲು ಎಷ್ಟು ಬಹಿರಂಗಪಡಿಸುವಿರಾ? ಎಂದು ಬಿಜೆಪಿ ಆಗ್ರಹ ಮಾಡಿದೆ

