ಸಮರ್ಪಣಾ ಮನೋಭಾವ ಸೇವಾ ಚಟುವಟಿಕೆಗಳಿಗೆ ಪ್ರೇರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇಲ್ಲಿನ ಲಯನ್ಸ್‌ಕ್ಲಬ್‌ಆಫ್‌ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಗೆ ಲಯನ್ಸ್‌ಜಿಲ್ಲೆ 317ಎಫ್‌ನ ಗೌರ್ನರ್‌ಆಕಾಶ್‌ಎ.ಸುವರ್ಣ ತಮ್ಮ ಸಂಪುಟ ಸದಸ್ಯರೊಂದಿಗೆ ಅಧಿಕೃತ ಭೇಟಿ ನೀಡಿದ್ದರು.

ಇದೇ ವೇಳೆ ದೊಡ್ಡಬಳ್ಳಾಪುರದ ವಿವಿದೆಡೆ ಆಯೋಜಿಸಲಾಗಿದ್ದ 15 ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಅವರು, ಶ್ರೀದೇವರಾಜ ಅರಸ್‌ಅಂತಾರಾಷ್ಟ್ರೀಯ ವಸತಿ ಶಾಲೆಯ ಸಭಾಂಗಣದಲ್ಲಿ ನಡೆದ ನಿರ್ದೇಶಕ ಮಂಡಲಿ ವಿಶೇಷ ಸಭೆ ಹಾಗೂ ಸರ್ವಸದಸ್ಯರ ಸಭೆಯಲ್ಲಿ ಭಾಗಿಯಾಗಿ ಕ್ಲಬ್‌ನ ಸೇವಾ ಹಾಗೂ ಆಡಳಿತಾತ್ಮಕ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದರು.

- Advertisement - 

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಯನ್ಸ್‌ಕ್ಲಬ್‌ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವ ಮತ್ತು ಮುಂಚೂಣಿಯ ನಾಯಕತ್ವವನ್ನು ವಿಶ್ವಾದ್ಯಂತ ಹೊಂದಿದೆ. ಆರ್.ಎಲ್.ಜಾಲಪ್ಪ ಲಯನ್ಸ್‌ಸಂಸ್ಥೆಯು ಆರಂಭವಾದ ದಿನದಿಂದಲೂ ತನ್ನ ಸಮರ್ಪಣಾ ಮನೋಭಾವ ಹಾಗೂ ಹೊಸತನದ ಚಿಂತನೆಗಳೊಂದಿಗೆ ಜಿಲ್ಲೆಯಲ್ಲಿ ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಮಧುಮೇಹ ವಿಶೇಷ ಕ್ಲಬ್‌ಆಗಿ ನೊಂದಣಿಯಾಗಿರುವ ಈ ಸಂಸ್ಥೆಯು ದೃಷ್ಠಿದೋಷ ನಿವಾರಣೆ, ಕ್ಯಾನ್ಸರ್‌ಜಾಗೃತಿ, ಪರಿಸರ ಕಾಳಜಿ, ಹಸಿವು ನಿವಾರಣೆ, ಸಾಮಾಜಿಕ ಕೈಂಕರ್ಯ, ಯುವ ಸಬಲೀಕರಣ, ಮಾನಸಿಕ ಆರೋಗ್ಯ, ಕ್ವೆಸ್ಟ್‌ಸೇರಿದಂತೆ ಹಲವು ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದು ಶ್ಲಾಘನೀಯ ಎಂದರು.

ಶ್ರೀ ದೇವರಾಜ ಅರಸ್‌ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಕ್ಲಬ್‌ಆರಂಭಗೊಂಡು ನಾಲ್ಕೂವರೆ ವರ್ಷಗಳಾಗಿದ್ದು, ಉತ್ತಮ ನಾಯಕತ್ವ ಹಾಗೂ ಮಾರ್ಗದರ್ಶನದಿಂದ ಉನ್ನತ ಹಂತಕ್ಕೆ ಬೆಳೆಯುತ್ತಿದೆ. ಸಮಾಜಸ್ನೇಹಿ ಕಾರ್ಯಚಟುವಟಿಕೆಗಳಿಂದ ಸದಾ ಕಾಲ ವಿಶೇಷವಾಗಿ ಗುರುತಿಸಿಕೊಳ್ಳುತ್ತಿದ್ದು, ಮುಂದೆಯೂ ಉತ್ತಮ ಸೇವಾ ಚಟುವಟಿಕೆಗಳನ್ನು ರೂಪಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

- Advertisement - 

ಅಧ್ಯಕ್ಷತೆ ವಹಿಸಿದ್ದ ಲಯನ್ಸ್‌ಕ್ಲಬ್‌ನ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್‌ಮಾತನಾಡಿ, ಕಳೆದ 6 ತಿಂಗಳ ಅವಧಿಯಲ್ಲಿ ಕ್ಲಬ್‌ನ ವತಿಯಿಂದ 260ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ವಿಶೇಷವಾಗಿ ಶೈಕ್ಷಣಿಕ ಕಾರ್ಯಕ್ರಮಗಳು, ಆರೋಗ್ಯ ಸೇವಾ ವಲಯವನ್ನು ಕೇಂದ್ರೀಕರಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿರುವ ಡಾ.ಎಸ್.ನಾಗರಾಜರಾವ್, ಭವ್ಯ, ಜಗನ್ನಾಥ್‌ಮತ್ತಿತರರನ್ನು ಸನ್ಮಾನಿಸಲಾಯಿತು. ಅನಾಥಾಶ್ರಮದ 30 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಲಾಯಿತು. ಶಂಕರ ಕ್ಯಾನ್ಸರ್‌ಆಸ್ಪತ್ರೆಯಲ್ಲಿ ಲಯನ್ಸ್‌ಮೂಲಕ ಸ್ಥಾಪಿಸಲಾಗುತ್ತಿರುವ ಯಂತ್ರೋಪಕರಣಕ್ಕೆ ಧನ ಸಹಾಯ, ಹಸಿವು ನಿವಾರಣೆಗೆ ಆರ್ಥಿಕ ನೆರವು ವಿತರಿಸಲಾಯಿತು.

ಕ್ಲಬ್‌ಗೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಜಿಲ್ಲಾ ವೈಸ್‌ಗೌರ್ನರ್‌ರಾಜು ಚಂದ್ರಶೇಖರ್‌ಪ್ರಮಾಣವಚನ ಬೋಧಿಸಿದರು. ಪ್ರಥಮ ಮಹಿಳೆ ಅಶ್ವಿನಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಆರ್.ವಿಜಯಾ, ಖಜಾಂಚಿ ಪ್ರದೀಪ್‌ಕುಮಾರ್, ಸದಸ್ಯತ್ವ ಸಮಿತಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ವಲಯ ಅಧ್ಯಕ್ಷ ಜೆ.ಆರ್.ರಾಕೇಶ್‌, ಕ್ಲಬ್‌ನ ಪ್ರಥಮ ಮಹಿಳೆ ಶೃತಿ ರವಿಕಿರಣ್, ಕಾರ್ಯದರ್ಶಿ ಎ.ಎಸ್.ಸುಮಾ, ಖಜಾಂಚಿ ಕೆ.ಸಿ.ನಾಗರಾಜ್, ಜಂಟಿ ಕಾರ್ಯದರ್ಶಿ ಮುಕೇಶ್‌ಮತ್ತಿತರರು ಭಾಗವಹಿಸಿದ್ದರು.

ವಿವಿಧ ಸೇವಾ ಕಾರ್ಯಕ್ರಮಗಳ ಆಯೋಜನೆ:
ಜಿಲ್ಲಾ ಗೌರ್ನರ್‌ಅಧಿಕೃತ ಭೇಟಿ ಹಿನ್ನಲೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ಉಚಿತ ಮಧುಮೇಹ ತಪಾಸಣಾ ಶಿಬಿರ
, ಆತಿಕ್ ಪೆಟ್ರೋಲ್‌ಬಂಕ್‌ನಲ್ಲಿ ವಾಹನಗಳಿಗೆ ಉಚಿತ ವಾಯು ಗುಣಮಟ್ಟ ತಪಾಸಣೆ, ಶಾಂತಿನಗರದ ಲಲಿತ್‌ಪೆಟ್‌ಕ್ಲಿನಿಕ್‌ನಲ್ಲಿ ಸಾಕು ನಾಯಿಗಳು ಹಾಗೂ ಬೆಕ್ಕುಗಳಿಗೆ ಉಚಿತ ರೇಬಿಸ್‌ಲಸಿಕೆ, ದೇವರಾಜ್ ಅರಸ್‌ಪ್ರೌಢಶಾಲೆಯಲ್ಲಿ ಕ್ಯಾನ್ಸರ್‌ಜಾಗೃತಿ ಶಿಬಿರ, ಪಾಲಿಟೆಕ್ನಿಕ್‌ವಿದ್ಯಾರ್ಥಿಗಳಿಂದ ಮಧುಮೇಹ-ದೃಷ್ಟಿ ಜಾಗೃತಿ ಜಾಥಾ,

ಕೊಡಿಗೇಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಕಂಟನಕುಂಟೆಯ ಬಿಂದು ಪ್ರೌಢಶಾಲೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ, ಲಿಟ್ಲ್‌ಮಾಸ್ಟರ್‌ಪಬ್ಲಿಕ್‌ಶಾಲೆಯಲ್ಲಿ ದಂತ ತಪಾಸಣೆ ಶಿಬಿರ, ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್‌ನಲ್ಲಿ ದ್ವಿಚಕ್ರವಾಹನಗಳಿಗೆ ಉಚಿತ ಆಯಿಲ್‌ಸರ್ವಿಸ್‌ಮತ್ತು ನಾಮಫಲಕ ಅನಾವರಣ, ಕಂಟನಕುಂಟೆ ವೃತ್ತ ಹಾಗೂ ಆಲಹಳ್ಳಿ ಬಳಿ ನಾಮಫಲಕಗಳ ಅನಾವರಣ, ಹಸಿವು ನಿವಾರಣಾ ಕಾರ್ಯಕ್ರಮ ಸೇರಿದಂತೆ 15 ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

 

 

Share This Article
error: Content is protected !!
";