ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿ ಗಂಡರಗೋಳಿಪುರ ಗ್ರಾಮದಲ್ಲಿ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಸಮಪರ್ಕವಾಗಿ ನಿರ್ವಹಣೆಯಾದರೆ ದೇಶದಲ್ಲಿನ ಶೇ.90 ರಷ್ಟು ಸಮಸ್ಯೆಗಳು ಪರಿಹಾರವಾದಂತೆಯೇ. ಹಾಗಾಗಿ ನಾವು ಅವುಗಳ ಸಮಸ್ಯೆಗಳು ಮತ್ತು ಪರಿಹಾರದ ಕುರಿತಾಗಿ ಗಂಭೀರವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಬೇಕಾದ ಸಮಯವಿದು ಎಂದು
ಕೌಮೋದಕಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತರಾಜು ಹೇಳಿದರು. ತಾಲ್ಲೂಕಿನ ಗಂಡರಗೋಳಿಪುರ ಗ್ರಾಮದಲ್ಲಿ ಭಾನುವಾರ ಕೌಮೋದಕಿ ಸಮಾಜ ಸೇವಾ ಸಂಘಹಾಗೂ ವೀ ಕೇರ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣ ಶಿಬಿರ ಮತ್ತು ದೊಡ್ಡಬೆಳವಂಗಲ ಘಟಕದ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜನಸಾಮಾನ್ಯರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಂತಹ ಒಳ್ಳೆಯ ಅಭಿಪ್ರಾಯವಿಲ್ಲ. ಇವನ್ನು ಪರಾಮರ್ಶೆ ಮಾಡಿ ಸೂಕ್ತವಾದ ಪರಿಹಾರ ಕೈಗೊಂಡರೆ ದೇಶದ ಅಭಿವೃದ್ಧಿಯ ಸಾಧ್ಯ. ನಮ್ಮ ಸಂಘವು ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಬಡವರು, ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಹೋರಾಟ ಮಾಡಲಿದೆ ಎಂದರು.
ದೊಡ್ಡಬೆಳವಂಗಲ ಹೋಬಳಿಯ ಸಂಘಟನಾ ಕಾರ್ಯದರ್ಶಿ ಕುಸುಮಾ ಮಾತನಾಡಿ ಸಮಾಜಮುಖಿ ಕೆಲಸಗಳಲ್ಲಿ ನಾವು ನಿರಂತರವಾಗಿ ತೊಡಗಿಸಿಕೊಳ್ಳುತ್ತೇವೆ. ಬಡವರು, ಆರ್ಥಿಕವಾಗಿ ತೀರಾ ಹಿಂದುಳಿದವರಿಗೆ ಸಹಾಯ ಮಾಡುವುದು ನಮ್ಮ ಉದ್ದೇಶ. ಸರ್ಕಾರಿ ಶಾಲೆಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ, ಕ್ರೀಡೆಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕೆಲಸ, ವಿಶೇಷ ಚೇತನರಿಗೆ ಸಹಾಯಧನವನ್ನು ನೀಡುವ ಉದ್ದೇಶ ಎನ್ನಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೌಮೋದಕಿ ಸಮಾಜ ಸೇವಾ ಸಂಘಕಾರ್ಯದರ್ಶಿ ಮಾಲಾ, ದೊಡ್ಡಬೆಳವಂಗಲ ಹೋಬಳಿ ಘಟಕದ ಅಧ್ಯಕ್ಷ ದೀಪಿಕಾ, ಉಪಾಧ್ಯಕ್ಷೆ ಲತಾ, ಕಾರ್ಯದರ್ಶಿ ಶೋಭಾ, ಸಂಘಟನಾ ಕಾರ್ಯದರ್ಶಿ ಕುಸುಮ, ಸಹ ಕಾರ್ಯದರ್ಶಿ ಪುಟ್ಟರಾಮಯ್ಯ, ಖಜಾಂಚಿ ಶ್ರೀನಿವಾಸ, ಮುಖಂಡರಾದ ಸುರೇಶ್, ಯೋಗೇಶ್, ಪ್ರಶಾಂತ, ಕಿರಣ್, ಸತೀಶ್, ಪುಟ್ಟಣ್ಣ, ಮಣಿ ಮತ್ತಿತರರು ಹಾಜರಿದ್ದರು.

