ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಒಂದಿಡೀ ಸಮಾಜ ತನ್ನ ನೆಲೆ ಹಾಗೂ ಪ್ರಸ್ತುತ ಸಮಾಜದಲ್ಲಿ ತನ್ನ ಪ್ರಗತಿಯ ಕುರಿತು ಅರಿತುಕೊಳ್ಳಬೇಕೆಂದರೆ ಅದಕ್ಕೆ ನಾನಾ ರೀತಿಯ ಮಾನದಂಡಗಳಿವೆ. ಅವುಗಳಲ್ಲಿ ಆ ಸಮಾಜದ ಜನರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳು ಬಹು ದೊಡ್ಡ ಪಾತ್ರವನ್ನು ನಿಭಾಯಿಸುತ್ತವೆ.
ಹೀಗಿರುವಾಗ ಆರ್ಥಿಕವಾಗಿ ಸಾಮಾಜಿಕವಾಗಿ ಯಾವುದೇ ಸಮಾಜ ಸ್ವಾವಲಂಭನೆಯನ್ನು ಸಾಧಿಸಬೇಕೆಂದರೆ ವೈವಿಧ್ಯಮಯ ಜನ ಜೀವನವನ್ನು ಒಟ್ಟುಗೂಡಿಸಿ, ಸರಿ ತಪ್ಪುಗಳನ್ನು ತಿದ್ದಿ ನಡೆಸುವ ಶಕ್ತಿಯೊಂದು ಅವಶ್ಯಕವಾಗಿ ಬೇಕೆ ಬೇಕು.
ಹೀಗಿರುವಾಗ, ಆ ಶಕ್ತಿಯನ್ನು ಹುಡುಕುವುದು ಎಲ್ಲಿ ಎಂದು ಅವಲೋಕಿಸಿದರೆ ನಮ್ಮ ಕಣ್ಣೆದುರಿಗೆ ಬರುವುದು, ಎಲ್ಲರನ್ನೊಗ್ಗೂಡಿಸಿ ಸರಿ ದಾರಿಗೆ ಒಂದು ಸಮಾಜವನ್ನು ನಡೆಸುವ ಸಾಮಥ್ಯ೯ವುಳ್ಳ ನಾಯಕತ್ವ. ಅಂತಹ ಉತ್ಕೃಷ್ಟ ಸಾಮಥ್ಯ೯ ವುಳ್ಳ ನಾಯಕತ್ವದ ಗುಣಗಳನ್ನು ಹೊಂದಿರುವ ವಿಶೇಷ ವ್ಯಕ್ತಿತ್ವ – ಕೆ.ಎಸ್.ಕಲ್ಮಠ್.
ಶಿಕ್ಷಣವೆಂದರೆ ವ್ಯಾಪಾರ ಎಂದೆನಿಸಿರುವ ಕಾಲಘಟ್ಟದಲ್ಲಿ ಶಿಕ್ಷಣಕ್ಕೆ ಆತ್ಮೀಯತೆಯ ರೂಪ ಕೊಟ್ಟು ಕಷ್ಟ ಎಂದು ಬಂದವರ ಕಣ್ಣಿರೊರೆಸಿ ಅವರ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಕಲಿಕೆಯನ್ನು ಮಕ್ಕಳಿಗೆ ಆತ್ಮೀಯಗೊಳಿಸುತ್ತಿದ್ದಾರೆ. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತ ಇಂದು ಶೈಕ್ಷಣಿಕ ಕ್ರಾಂತಿಯನ್ನೇ ಮಾಡುವಲ್ಲಿ ಕಲ್ಮಠ್ ರವರು ಯಶಸ್ವಿಯಾಗಿದ್ದಾರೆ.ಸಾವಿರಾರು ಮಕ್ಕಳಿಗೆ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ.

ಕ್ಲಾಸ್ ರೂಮಲ್ಲಿ ಕಲ್ಮಠ್:
ಮಕ್ಕಳು ಮೌಲ್ಯಯುತ ಶಿಕ್ಷಣವನ್ನು ಪಡೆಯುವ ನಿಟ್ಟಿನಲ್ಲಿ, ನೈತಿಕ ಶಿಕ್ಷಣದ ಜೊತೆ ಜೊತೆಗೆ ಆಧುನಿಕ ಸೌಕರ್ಯಗಳನ್ನು ಒದಗಿಸಿ ಹೊಸ ಬೆಳವಣಿಗೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತಿದ್ದಾರೆ. ನೀವು ನಿಮ್ಮ ಮಕ್ಕಳಿಗೆ ಸಂಸ್ಕೃತಿಯ ಪಾಠ ಮಾಡುವುದು ಒಂದು ದಿನವಾದರೂ ಮರೆತು ಹೋಗಬಹುದು. ಆದರೆ ನಮ್ಮ ಸಂಸ್ಥೆಯ ಒಂದಿಲ್ಲೊಂದು ತರಗತಿಯಲ್ಲಿ ಕಲ್ಮಠ್ ಸರ್ ಸಂಸ್ಕೃತಿಯ ಪಾಠದಲ್ಲಿ ತೊಡಗಿರುತ್ತಾರೆಂದರೆ ನಿಮಗೆ ಆಶ್ಚರ್ಯವಾಗದೇ ಇರದು. ಇದನ್ನು ಪ್ರಸ್ತಾಪಿಸುವ ಉದ್ದೇಶ ಇಷ್ಟೆ, ಒಬ್ಬ ಆಡಳಿತಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಗೆ ಸಾಕಷ್ಟು ಜವಾಬ್ದಾರಿಗಳಿವೆ ಒತ್ತಡಗಳಿರುತ್ತವೆ. ಅದೆಲ್ಲದರ ನಡುವೆಯೂ ಕ್ಲಾಸ್ ರೂಮಿನಲ್ಲಿ ಕಲ್ಮಠ್ ಸರ್ ಕಾಣಿಸಿಕೊಳ್ಳುತ್ತಾರೆ ಮಕ್ಕಳೊಂದಿಗೆ ಮಕ್ಕಳಾಗುತ್ತಾರೆ. ತಂದೆ ತಾಯಿಗೆ ಕಾಲು ಮುಗಿದು ಬರಲು, ಮನೆ ಕೆಲಸದಲ್ಲಿ ಬಾಗಿಯಾಗಲು, ಟಿವಿ ಮೊಬೈಲ್, ತೊರೆಯಲು ಮಕ್ಕಳಲ್ಲಿ ಮನವಿ ಮಾಡುತ್ತಾರೆ. ಇದು ಕಲ್ಮಠ್ ಸರ್ ವ್ಯಕ್ತಿತ್ವ.
ಹೀಗೆ, ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಮೂಲಕ ಹೊಸದುರ್ಗದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮೇಲುಗೈ ಸಾಧಿಸುವಲ್ಲಿ ಕೆ.ಎಸ್. ಕಲ್ಮಠ್ ರವರು ನಿಭಾಯಿಸಿರುವ ಪಾತ್ರ ಗಣನೀಯವಾಗಿದೆ.
ಸರ್ವತೋಮುಖ ಅಭಿವೃದ್ದಿಯ ಕನಸುಗಾರ:
ವೈಯಕ್ತಿಕವಾಗಿ ಕಲ್ಮಠ್ ಸರ್ ಅವರನ್ನು ಹತ್ತಿರದಿಂದ ನೋಡಿರುವ ನನಗೆ ಅವರದ್ದು ಮೃದು ಸ್ವಭಾವ, ಬಹಳ ಪ್ರೀತಿಯ ಜೀವ. ದೂರದೃಷ್ಟಿಯುಳ್ಳ ವ್ಯಕ್ತಿತ್ವ. ಶಿಕ್ಷಣ ಕ್ಷೇತ್ರವೇ ಆಗಲಿ, ಅವರ ನ್ಯಾಯಾಂಗ ವೃತ್ತಿಯಲ್ಲೇ ಆಗಲಿ, ಸಾಮಾಜಿಕ ಕಳಕಳಿಯ ವಿಷಯವೇ ಆಗಲಿ, ಆರ್ಥಿಕ ಕೊಡುಗೆಯ ವಿಷಯವೇ ಇರಲಿ, ಸಾಂಸ್ಕೃತಿಕ ಪರಂಪರೆಯ ವಿಷಯವೇ ಆಗಲಿ. ಕನ್ನಡ ನಾಡು ನುಡಿಯ ವಿಷಯವೇ ಇರಲಿ, ಎಲ್ಲ ರಂಗಗಳಲ್ಲೂ ವಿಶೇಷ ಛಾಪನ್ನು ಮೂಡಿಸಿರುವವರು ಕಲ್ಮಠ್ ಸರ್.
ಕನ್ನಡದ ಕಂದ:
ನವ್ಹೆಂಬರ್ ಬಂತೆಂದರೆ ಸಂಸ್ಥೆಯ ಎಲ್ಲರಿಗೂ ಹಬ್ಬದ ವಾತಾವರಣ. ಒಂದಿಡೀ ಸಂಸ್ಥೆ ಕುಟುಂಬದಂತೆ ಸೇರಿ ಇಡೀ ಊರು ಕಣ್ತುಂಬಿಕೊಂಡು ನೋಡುವಂತೆ ಕನ್ನಡ ನಾಡಿನ ಹಬ್ಬವನ್ನು ಕಳೆಗಟ್ಡುವಂತೆ ಮಾಡುತ್ತೇವೆ. ಅದಕ್ಕೆ ಕಾರಣ ಕಲ್ಮಠ್ ಸರ್ ಹಾಗೂ ಅವರ ನಮ್ಮಲ್ಲಿ ತುಂಬವ ಉತ್ಸಾಹ.
ಪುಟ್ಟ ಮಗುವಿನ ಹಾಗೆ ಊರ ಬೀದಿಗಳಲ್ಲಿ ಕನ್ನಡದ ದ್ವಜವನ್ನು ಕೊರಳಿಗೆ ಸುತ್ತಿಕೊಂಡು ಮಕ್ಕಳೊಂದಿಗೆ ನಡೆಯುವ ಅವರ ಜೀವನೋತ್ಸಾಹವೇ ನಮ್ಮೆಲ್ಲರಿಗೂ ಒಂದು ಪಾಠ.
ಉತ್ತಮ ಆಡಳಿತಗಾರ:
ನಾಡಿನ ಹಲವಾರು ಸಂಸ್ಥೆಗಳಲ್ಲಿ ಅವಿರತ ಶ್ರಮಿಸಿ ತಾವು ಹೊಂದಿದ ಎಲ್ಲ ಹುದ್ದೆಗಳಿಗೂ ನ್ಯಾಯ ಒದಗಿಸಿಕೊಟ್ಡವರು ಕಲ್ಮಠ್ ಸರ್. ಪ್ರಮುಖ ಬ್ಯಾಂಕುಗಳ, ವೀರಶೈವ ಲಿಂಗಾಯತ ಸಮಾಜದ ಪ್ರಮುಖ ಸಂಘಗಳ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆ ಹಾಗೂ ಹೊಸದುರ್ಗದ ಕೆಲವು ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಕಲ್ಮಠ್ ಸರ್ ರವರ ನಾಯಕತ್ವದ ಗುಣವನ್ನು ಇಡೀ ಹೊಸದುರ್ಗ ಕಂಡಿದೆ.
ಹೀಗೆ ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕಲ್ಮಠ್ ಅವರು ಇಂದು ಹೊಸದುರ್ಗದಲ್ಲಿ ಬೃಹತ್ ಹಿಂದೂ ಸಮಾಜದ ಕಾರ್ಯಕ್ರಮದ ಅಧ್ಯಕ್ಷರಾಗಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ತಾಲ್ಲೂಕಿನ ಹಿಂದೂ ಸಮಾಜವನ್ನು ಒಗ್ಗೂಡಿಸಿ ಜಾಗಥರಿ ಮೂಡಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಅವರ ನಾಯಕತ್ವದಲ್ಲಿ ಕಾರ್ಯಕ್ರಮ ಸಂಪನ್ನವಾಗಲಿ ಸಂಪೂರ್ಣ ಯಶಸ್ವಿಗಾಲಿ ಎಂದೂ ಆಶಿಸುತ್ತಾ. ಈ ಮೂಲಕ ಕಲ್ಮಠ್ ಸರ್ ರಾಜಕೀಯವಾಗಿಯೂ ಉತ್ತಮ ಸ್ಥಾನಕ್ಕೆರಲಿ ಅವರ ದೂರದೃಷ್ಟಿಯುಳ್ಳ ನಾಯಕತ್ವದ ಸವಿ ಇಡೀ ಹೊಸದುರ್ಗ ತಾಲ್ಲೂಕಿಗೆ ಸಿಗಲಿ ಮತ್ತು ಆ ಮೂಲಕ ಜ್ಯಾತ್ಯಾತೀತವಾಗಿ ಕಲ್ಮಠ್ ಸರ್ ಗುರುತಿಸಿಕೊಂಡು ಹೊಸದುರ್ಗದ ಹೊಸ ಇತಿಹಾಸವನ್ನು ಬರೆಯುವ ನಿಟ್ಡಿನಲ್ಲಿ ಬೆಳೆದು ನಿಲ್ಲಲಿ ಎನ್ನುವ ಪ್ರಬಲ ಹಂಬಲ ನನ್ನದು.
ಹತ್ತಾರು ಕ್ಷೇತ್ರಗಳಲ್ಲಿ, ಹೆಸರು ಮಾಡಿರು ಹೊಸದುರ್ಗದ ಹಿರಿಯ ಜೀವ, ನಮ್ಮ ಕಲ್ಮಠ್ ಸರ್ ಗೆ ರಾಜಕೀಯ ಸ್ಥಾನಮಾನಗಳೂ ದೊರಕಿದ್ದಲ್ಲಿ ಹೊಸದುರ್ಗಕ್ಕೆ ಹೊಸ ದಿಶೆ ಸಿಗುವುದರಲ್ಲಿ ಎರಡು ಮಾತಿಲ್ಲ ಏನಂತೀರಿ….!
ಲೇಖನ-ಡಾ. ಉಮರ ಫಾರೂಕ್ ಜೆ. ಮೀರಾನಾಯಕ,ಸಂಯೋಜಕರು, ವಿ.ಎಲ್. ಸ್ಪರ್ಧಾ ಅಕಾಡೆಮಿ ಹೊಸದುರ್ಗ.

