ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯವು 2026-27 ನೇ ಸಾಲಿನಲ್ಲಿ ಓರ್ವ ನಿವೃತ್ತ ಸೈನ್ಯಾಧಿಕಾರಿಗಳಿಗೆ ಒಪ್ಪಂದದ ಮೇರೆಗೆ ಶಿಸ್ತು ಮತ್ತು ಜಾಗೃತಿ ಹುದ್ದೆಗೆ ಕೆಲವು ಷರತ್ತುಗಳೊಂದಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜ.25 ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತರು ಅರ್ಜಿಯನ್ನು ಇಮೇಲ್ [email protected] ಮೂಲಕ ಮತ್ತು ಅಂಚೆ ವಿಳಾಸ NCC Dte (Karnataka and Goa) KSCMF, Building, 4th Floor, No-8, Cunningham Road, Bengaluru-560001 ಮೂಲಕ ಸಲ್ಲಿಸಬೇಕಾಗಿರುತ್ತದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

