ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇವದುರ್ಗ ಶಾಸಕರಾದ ಶ್ರೀಮತಿ ಕರೆಮ್ಮ ಜಿ. ನಾಯಕ ಅವರಿಗೆ ಮರಳು ದಂಧೆಕೋರರು ಪ್ರಾಣ ಬೆದರಿಕೆ ಹಾಕಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದು ಜೆಡಿಎಸ್ ಆರೋಪಿಸಿದೆ.
ಶಾಸಕರಾದ ಕರೆಮ್ಮ ಜಿ. ನಾಯಕ ಅವರು, ಕೃಷ್ಣಾ ನದಿ ಪಾತ್ರದಲ್ಲಿನ ಅಕ್ರಮ ಮರಳು ದಂಧೆ, ತಾಲ್ಲೂಕಿನಲ್ಲಿ ಮಟ್ಕಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ.
ಇದನ್ನು ಸಹಿಸದ ಕರ್ನಾಟಕ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ಸಹೋದರ ಶ್ರೀನಿವಾಸ ನಾಯಕ ನೇತೃತ್ವದಲ್ಲಿ, 60ಕ್ಕೂ ಹೆಚ್ಚು ಮಂದಿಯ ತಂಡ ಶಾಸಕರ ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಂಗ್ರೆಸ್ಮುಖಂಡರ ಗೂಂಡಾಗಿರಿ, ದೌರ್ಜನ್ಯ ಮಿತಿಮೀರಿದ್ದು, ಶಾಸಕರುಗಳಿಗೆ ರಕ್ಷಣೆ ಇಲ್ಲ ಎಂದರೇ ಇನ್ನೂ ರಾಜ್ಯದ ಜನಸಾಮಾನ್ಯರ ಗತಿಯೇನು ? ಗೃಹ ಸಚಿವ ಪರಮೇಶ್ವರ ಅವರೇ ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

