ಪ್ಲಾಸ್ಟಿಕ್ ರಹಿತ ಸ್ಥಿರ ವಸ್ತು ಉತ್ಪಾದನೆಗೆ ಆದ್ಯತೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಪ್ಲಾಸ್ಟಿಕ್ ರಹಿತ ಸ್ಥಿರ ವಸ್ತು ಉತ್ಪಾದನೆಗೆ
NFW ಹೂಡಿಕೆ ಆಸಕ್ತಿ ಹೊಂದಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಪ್ಲಾಸ್ಟಿಕ್‌ರಹಿತ, ಸಸ್ಯಾಧಾರಿತ ಚರ್ಮ, ಬಟ್ಟೆ ಹಾಗೂ ಫೋಮ್ ಗಳಿಗೆ ಪರ್ಯಾಯ ವಸ್ತುಗಳನ್ನು ಅಭಿವೃದ್ಧಿಪಡಿಸುತ್ತಿರುವ ಪ್ರಮುಖ ಮೆಟೀರಿಯಲ್-ಸೈನ್ಸ್ ಕಂಪನಿ ನ್ಯಾಚುರಲ್ ಫೈಬರ್ ವೆಲ್ಡಿಂಗ್ (NFW Earth) ಜೊತೆ ಸಾರ್ಥಕ ಸಭೆ ನಡೆಸಿದೆವು.

- Advertisement - 

 BMW, Adidas, Levi’s ಸೇರಿದಂತೆ ಜಾಗತಿಕ ಬ್ರ್ಯಾಂಡ್‌ಗಳೊಂದಿಗೆ ಸಹಭಾಗಿತ್ವ ಹೊಂದಿರುವ NFW ಸಂಸ್ಥೆ, ಭಾರತದಲ್ಲಿ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ವಿಸ್ತರಿಸುವ ಕುರಿತು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದರು.

ಈ ಹಿನ್ನೆಲೆದಲ್ಲಿ, 1,600–1,800 ಕೋಟಿ ಮೊತ್ತದ ಹಂತ–1 ಹೂಡಿಕೆ ಯೋಜನೆಯನ್ನು ಕಂಪನಿ ಪ್ರಸ್ತಾಪಿಸಿದ್ದು, ಕರ್ನಾಟಕದ ಕೈಗಾರಿಕಾ ಪ್ರೋತ್ಸಾಹ ನೀತಿ ಹಾಗೂ ಅವಕಾಶಗಳ ಕುರಿತು ವಿವರಿಸಿದೆವು.

- Advertisement - 

ಅಗತ್ಯ ಅನುಮೋದನೆಗಳು, ಮೂಲಸೌಕರ್ಯ ಬೆಂಬಲ ಮತ್ತು ಕೈಗಾರಿಕಾ ಪರಿಸರ ಸಂಪರ್ಕ ಸೇರಿದಂತೆ ಸಂಪೂರ್ಣ ಸರ್ಕಾರಿ ಸಹಕಾರದ ಭರವಸೆ ನೀಡಲಾಯಿತು.

ಮುಂದಿನ ಹಂತದ ಚರ್ಚೆಗಾಗಿ ಸಂಸ್ಥೆಯು ಶೀಘ್ರದಲ್ಲೇ ಕರ್ನಾಟಕ ಸರ್ಕಾರಕ್ಕೆ ವಿವರವಾದ ಯೋಜನಾ ಪ್ರಸ್ತಾವನೆಯನ್ನು ಸಲ್ಲಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

 

Share This Article
error: Content is protected !!
";