ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯ ದರ್ಜಿ ಕಾಲೋನಿಯ ನಿವಾಸಿ ಖ್ಯಾತ ವೈದ್ಯರಾದ ಡಾ.ಎಂ.ಕೆಂಚಯ್ಯ(82) ಅವರು ಚಿತ್ರದುರ್ಗದ ಮನೆಯಲ್ಲಿ ವಯೋ ಸಹಜ ಕಾಯಿಲೆಯಿಂದ ಬುಧವಾರ ನಿಧನರಾಗಿದ್ದಾರೆ.
ಮೃತರಿಗೆ ನಾಲ್ಕು ಮಂದಿ ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಚಿತ್ರದುರ್ಗದ ಕೆಂಚಪ್ಪನ ಬಾವಿ ಮುಕ್ತಿ ಧಾಮದ ಬಳಿ ಇರುವ ಜಾಗದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಮೃತರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

