ಜನವರಿ 24ರಂದು ಜನತಾ ಸಮಾವೇಶ-ಕೇಂದ್ರ ಸಚಿವ ಕುಮಾರಸ್ವಾಮಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನ ನಗರದಲ್ಲಿ ಇದೇ ಜನವರಿ 24ರಂದು ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಜನತಾ ಸಮಾವೇಶದ ಪೂರ್ವಸಿದ್ಧತೆಗಳನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರೊಂದಿಗೆ ಪರಿಶೀಲನೆ ನಡೆಸಿದರು.

ಇದೇ ಜನವರಿ 24ರಂದು ಜೆಡಿಎಸ್​ ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್​​​ಡಿ ಕುಮಾರಸ್ವಾಮಿ ಅವರು ಜನವರಿ 21 ಹಾಸನಕ್ಕೆ ಭೇಟಿ ನೀಡಿ ಸಮಾವೇಶದ ಪೂರ್ವ ಸಿದ್ಧತೆಗಳನ್ನು ಪರಿಶೀಲನೆ ಮಾಡಿದರು.

- Advertisement - 

ಬಳಿಕ ಎಚ್​​​ಡಿಕೆ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ವೇಳೆ ಸಹೋದರ ಹೆಚ್.​​​ಡಿ ರೇವಣ್ಣ ಮೇಲೆ ಕೋಪಗೊಂಡ ಪ್ರಸಂಗ ಜರುಗಿದೆ.

ಕುಮಾರಸ್ವಾಮಿ ಮಾತನಾಡುವಾಗ ಪಕ್ಕದಲ್ಲೇ ಕುಳಿತ್ತಿದ್ದ ರೇವಣ್ಣ ಸಹ ಅಡ್ಡ ಬಾಯಿ ಹಾಕಿದರು. ಇದರಿಂದ ಕುಮಾರಸ್ವಾಮಿ ಸ್ವಲ್ಪ ಸುಮ್ನೆ ಇರು ಎಂದು ಕೈ ಸಂಜ್ಞೆ ಮಾಡಿದರು. ಆಗ ರೇವಣ್ಣ ಸೈಲೆಂಟ್ ಮೂಡಿಗೆ ಜಾರಿದರು.

- Advertisement - 

ಮಾಜಿ ಮಂತ್ರಿಗಳು ಹಾಗೂ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್‌.ಡಿ. ರೇವಣ್ಣ, ವಿಧಾನ ಪರಿಷತ್‌ಶಾಸಕಾಂಗ ಪಕ್ಷದ ನಾಯಕ ಎಸ್‌.ಎಲ್‌. ಭೋಜೇಗೌಡ, ಮಾಜಿ ಮಂತ್ರಿ ಹೆಚ್.ಕೆ. ಕುಮಾರಸ್ವಾಮಿ, ಶಾಸಕ ಸ್ವರೂಪ್‌ಪ್ರಕಾಶ್‌, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಲಿಂಗೇಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

Share This Article
error: Content is protected !!
";