ದಾವೋಸ್ 2026 ಭಾರತದ ಸ್ಮಾರ್ಟ್ ಎನರ್ಜಿ ನವೀನತೆಯ ಪ್ರಮುಖ ಕೇಂದ್ರವಾಗಿ ಕರ್ನಾಟಕ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಮಾರ್ಟ್ ಮೀಟರಿಂಗ್, ಡಿಜಿಟಲ್ ಎನರ್ಜಿ ಪ್ಲಾಟ್ಫಾರ್ಮ್ ಗಳು ಮತ್ತು ಡೈನಾಮಿಕ್ ಟ್ಯಾರಿಫ್ ಮಾದರಿಗಳ ಮೂಲಕ ವಿದ್ಯುತ್ ಗ್ರಿಡ್ ದಕ್ಷತೆ, ಬೇಡಿಕೆ-ಪೂರೈಕೆ ನಿರ್ವಹಣೆ ಹಾಗೂ ನವೀಕರಿಸಬಹುದಾದ ಇಂಧನ ಏಕೀಕರಣವನ್ನು ಬಲಪಡಿಸುವ ತಂತ್ರಜ್ಞಾನ ಆಧಾರಿತ ಪರಿಹಾರಗಳಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಆಕ್ಟೋಪಸ್ ಎನರ್ಜಿ ಸಂಸ್ಥೆಯ ಸಹಸ್ಥಾಪಕ ಸ್ಟುವರ್ಟ್ ಜ್ಯಾಕ್ಸನ್ ಅವರೊಂದಿಗೆ ಸುದೀರ್ಘವಾದ ತಾಂತ್ರಿಕ ಚರ್ಚೆ ನಡೆಸಿದೆವು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಕಂಪನಿಯ ನಿಯೋಗದೊಂದಿಗೆ ವಿ2ಜಿ (ವೆಹಿಕಲ್ ಟು ಗ್ರಿಡ್) ತಂತ್ರಜ್ಞಾನ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ವಿತರಣಾ ಮಟ್ಟದಲ್ಲಿ ಡಿಜಿಟಲ್ ನಿಯಂತ್ರಣ, ಎನರ್ಜಿ ಸಂಗ್ರಹಣೆ ಮತ್ತು ಸ್ಮಾರ್ಟ್ ಉಪಕರಣಗಳ ಸಂಯೋಜನೆಯ ಮೂಲಕ ನೆಟ್-ಜೀರೋ ಗೃಹ ವಸತಿ ಗುರಿಯನ್ನು ಸಾಧಿಸುವ Octopus “Zero Bills” ಹೋಮ್ಸ್ ಮಾದರಿ ಕುರಿತು ವಿವರವಾಗಿ ಚರ್ಚಿಸಿದೆವು.

- Advertisement - 

ಇದು ಸಾಧ್ಯವಾದರೆ ಗ್ರಾಹಕರಿಗೆ ಹೆಚ್ಚಿನ ಮಿತವ್ಯಯದ ಲಾಭ ಸಿಗಲಿದೆ. ಈ ಸಂಬಂಧ ಚರ್ಚಿಸಲು ಬೆಸ್ಕಾಂ ಜತೆ ಮಾತುಕತೆಗೆ ಅನುಕೂಲ ಕಲ್ಪಿಸಿಕೊಡುವ ಭರವಸೆ ನೀಡಿದ್ದೇವೆ ಎಂದು ಸಚಿವ ಪಾಟೀಲ್ ತಿಳಿಸಿದರು.

 

- Advertisement - 

Share This Article
error: Content is protected !!
";