ಕೈಗಾರಿಕಾ ಜಲ ಭದ್ರತೆಗೆ ಜಾಗತಿಕ ಸಹಭಾಗಿತ್ವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೈಗಾರಿಕಾ ಜಲ ಭದ್ರತೆಗೆ ಜಾಗತಿಕ ಸಹಭಾಗಿತ್ವ: Xylem Inc ಜೊತೆ TTP ಮತ್ತು AI ಆಧಾರಿತ ನೀರಿನ ಪರಿಹಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಪ್ರಮುಖ ಜಲ ತಂತ್ರಜ್ಞಾನ ಸಂಸ್ಥೆಯಾದ Xylem Inc. ಜೊತೆಗೆ ಕರ್ನಾಟಕದಲ್ಲಿ ಕೈಗಾರಿಕಾ ಜಲ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಮಲಿನ ನೀರು ಶುದ್ಧೀಕರಣ ಮತ್ತು ಟರ್ಶಿಯರಿ ಟ್ರೀಟೆಡ್ ವಾಟರ್ (TTP) ಘಟಕಗಳ ಕುರಿತು ಚರ್ಚಿಸಲಾಯಿತು.

- Advertisement - 

KIADBಯ  ಕೈಗಾರಿಕಾ ಪ್ರದೇಶದಲ್ಲಿ ಒಂದು ಪೈಲಟ್ TTP ಸೌಲಭ್ಯವನ್ನು ಪ್ರಾರಂಭಿಸುವ ಬಗ್ಗೆ ಮಾತನಾಡಿದೆವು. ಇದರಿಂದ ಸಾಮರ್ಥ್ಯ, ತಂತ್ರಜ್ಞಾನದ ಕಾರ್ಯಕ್ಷಮತೆ ಮತ್ತು ಬೆಲೆ ಮಾದರಿಗಳನ್ನು ಸುಧಾರಿಸಿ, ಕೈಗಾರಿಕೆಗಳಿಗೆ ವಿಶ್ವಾಸಾರ್ಹ ಮತ್ತು ಕಡಿಮೆ ಬೆಲೆಯ ನೀರು ದೊರೆಯುವಂತೆ ಮಾಡಬಹುದು.

ಜೊತೆಗೆ ನೀರಿನ ವ್ಯರ್ಥವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸಲು AI (ಕೃತಕ ಬುದ್ಧಿಮತ್ತೆ) ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ನೀರಿನ ನಿರ್ವಹಣೆಯ ಬಗ್ಗೆಯೂ ಚರ್ಚೆ ಮಾಡಿದೆವು ಎಂದು ಸಚಿವ ಪಾಟೀಲ್ ಹೇಳಿದರು.

- Advertisement - 

Share This Article
error: Content is protected !!
";