ಸಾಂಸ್ಕೃತಿಕ ಕಲೆ ಸಮುದಾಯಗಳನ್ನು ಬೆಸೆಯುತ್ತದೆ-ರವಿಕುಮಾರ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಮ್ಮ ಜೀವನದ ಆನೇಕ ಕಲೆ ಸಂಸ್ಕೃತಿಯ ಬಗ್ಗೆ ಉತ್ತೇಜಿಸುವುದು ಅನಿವಾರ್ಯವಾಗಿದೆ   ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಿ.ಎಂ.ರವಿಕುಮಾರ್ ಹೇಳಿದರು.

ಅವರು ನಗರದ ಕನ್ನಡ ಜಾಗೃತಿ ಭವನದಲ್ಲಿ ನಾಟ್ಯ ಮಯೂರಿ ಕಲಾ ಕೇಂದ್ರ ಟ್ರಸ್ಟ್‌ವತಿಯಿಂದ ಆಯೋಜಿಸಲಾಗಿದ್ದ 14ನೇ ವಾರ್ಷಿಕೋತ್ಸವ ಕರುನಾಡ ಸಾಂಸ್ಕೃತಿಕ ಉತ್ಸವ – 2026 ಉದ್ಘಾಟಿಸಿ ಮಾತನಾಡಿದ ಅವರು

- Advertisement - 

ಸಾಂಸ್ಕೃತಿಕ ಕಲೆ ಎಂದರೆ ಒಂದು ಜನಾಂಗದ ಅಥವಾ ಪ್ರದೇಶದ ಜೀವನಶೈಲಿ, ನಂಬಿಕೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಸೃಜನಶೀಲ ಅಭಿವ್ಯಕ್ತಿಗಳಾದ ಚಿತ್ರಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ರಂಗಭೂಮಿ, ಸಾಹಿತ್ಯ ಇತ್ಯಾದಿಗಳ ಸಂಗ್ರಹವಾಗಿದೆ. ಇದು ಇತಿಹಾಸಪೂರ್ವ ಕಾಲದಿಂದಲೂ ಪ್ರಚಲಿತದಲ್ಲಿದ್ದು ಸಮುದಾಯಗಳನ್ನು ಬೆಸೆಯುತ್ತದೆ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತದೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಯಕ್ಷಗಾನ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ಮುಂತಾದ ಜಾನಪದ ಕಲೆಗಳು ಮತ್ತು ಶಾಸ್ತ್ರೀಯ ಸಂಗೀತ, ಭರತನಾಟ್ಯಗಳು ಪ್ರಮುಖವಾಗಿವೆ ಎಂದರು.

ನಂತರ  ಕನ್ನಡಪರ ಹಿರಿಯ  ಹೋರಾಟಗಾರ ತ.ನ. ಪ್ರಭುದೇವ್ ಮಾತನಾಡಿ, ನಾವು ನಮ್ಮ ಸಂಸ್ಕೃತಿಯನ್ನು ಕಲೆಯನ್ನು ಉಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ನಾಟ್ಯ ಮಯೂರಿ ಕಲಾ ಸಂಘವು ಕಳೆದ 14 ವರ್ಷಗಳಿಂದ ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿರುವುದು ಸಂತೋಷದ ಸಂಗತಿ. ನಾಟ್ಯ ಮಯೂರಿ ಕಲಾ ಕೇಂದ್ರವು ತಾಲ್ಲೂಕಿನ ಹೂಸ ಪ್ರತಿಭೆಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ ಎಂದು ಶುಭ ಹಾರೈಸಿದರು.

- Advertisement - 

 ಸಾಧಕರಿಗೆ ಸನ್ಮಾನ;
ಪೋಷಕರು ಹಾಗು ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ
, ಜಾನಪದ ನೃತ್ಯ, ಭರತ ನಾಟ್ಯ, ಗಾಯನ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು.

 ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ನಂಜುಂಡೇಶ್ವರಸ್ವಾಮಿ ಬಾಬು, ಕನ್ನಡ ಜಾಗೃತ ಪರಿಷತ್‌ಅಧ್ಯಕ್ಷ ಕೆ.ವೆಂಕಟೇಶ, ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜ್, ನೇಕಾರ ಹೋರಾಟ ಸಮಿತಿಯ ಅದ್ಯಕ್ಷ ಹೇಮಂತರಾಜು, ಮಹಿಳಾ ಸಮಾಜದ ಅದ್ಯಕ್ಷೆ ಎಂ.ಕೆ. ವತ್ಸಲಾ, ಕನ್ನಡ ಪ್ರಾಧ್ಯಾಪಕೆ ಕೆ.ಎಚ್.ಸುಮಲತಾ, ಲಯನ್ಸ್ ಕ್ಲಬ್ ಉಪಾದ್ಯಕ್ಷೆ ವಸುಂದರಾ ದೇವಿ, ಹಿರಿಯ ಕಲಾವಿದೆ ನಾಗರತ್ನಮ್ಮ, ಕೆಂಪೇಗೌಡ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಲಕ್ಷ್ಮಮ್ಮ, ನಾಟ್ಯ ಮಯೂರಿ ಕಲಾ ಕೇಂದ್ರ 9 ಟ್ರಸ್ಟ್ ಅಧ್ಯಕ್ಷೆ ಮೈತ್ರಾ ಅರುಣಮೂರ್ತಿ, ಕಾರ್ಯದರ್ಶಿ ಹಂಸವೇಣಿ ವಿನಯ್ ಕುಮಾರ್ ಕಲಾ ಪ್ರತಿಭೆಗಳು ಹಾಜರಿದ್ದರು.

 

 

Share This Article
error: Content is protected !!
";