ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಒಬ್ಬ ವ್ಯಕ್ತಿಯಲ್ಲಿರುವ ಸಹಜ ಸಾಮರ್ಥ್ಯ, ಕೌಶಲ್ಯ ಮತ್ತು ಯೋಗ್ಯತೆ, ಇದು ಅವರನ್ನು ನಿರ್ದಿಷ್ಟ ಕೆಲಸಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ತನ್ನಲ್ಲಿ ಇದು ಕಲಿತ ಕೌಶಲ್ಯಗಳ ಬದಲಿಗೆ ಸೃಜನಶೀಲತೆ, ಚುರುಕುಬುದ್ಧಿ ಮತ್ತು ಹೊಸ ವಿಷಯಗಳನ್ನು ಬೇಗ ಕಲಿಯುವಂತಹ ಗುಣಗಳನ್ನು ಒಳಗೊಂಡಿದೆ,
ಇದು ತರ್ಕಶಕ್ತಿ ಮತ್ತು ಕಠಿಣ ಪರಿಶ್ರಮದೊಂದಿಗೆ ಸೇರಿ ಯಶಸ್ಸಿಗೆ ಕಾರಣವಾಗುತ್ತದೆ. ಇಂತಹ ಗ್ರಾಮೀಣ ಪ್ರತಿಭೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿ ಕೊಂಡು ಜಡೇಶ್ ಕೆ ಹಂಪಿ ನಿರ್ದೇಶನದ ಸಾರಥಿ ಸತ್ಯ ಪ್ರಕಾಶ್ ಹಾಗೂ ಅವರ ಸುಪುತ್ರ ಹೇಮಂತ್ ಗೌಡ ರವರು ನಿರ್ಮಾಣ ಮಾಡಿರುವ ದುನಿಯಾ ವಿಜಯ್ ರಾಜ್ ಬಿ ಶೆಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ನಮ್ಮ ಮಣ್ಣಿನ ಕಥೆಯುಳ್ಳ ಸಿನಿಮಾ. ಲ್ಯಾಂಡ್‌ಲಾರ್ಡ್ ನಾಳೆ ರಾಜ್ಯದ್ಯಾಂತ ಬಿಡುಗಡೆ
ಯಾಗಲಿರುವ ಸಿನಿಮಾದಲ್ಲಿ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿಯ ಉಜ್ಜಿನಿ ಗ್ರಾಮದ ಗ್ರಾಮೀಣ ಪ್ರತಿಭೆ ಲಕ್ಷ್ಮಿ ಕಾಂತ್ ಸೂರ್ಯ ರವರು ರಾಜ್ ಬಿ ಶೆಟ್ಟಿ ರವರ ತಮ್ಮನ ವಿಶೇಷವಾದ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದು ದೊಡ್ಡಬಳ್ಳಾಪುರ ತಾಲೂಕಿನ ಅಭಿಮಾನ ಹಾಗು ಕೀರ್ತಿಗೆ ಪಾತ್ರರಾಗಿದ್ದಾರೆ.

