ತರಕಾರಿ ವರ್ತಕರ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ ನಗರಸಭೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾರದ ಸಂತೆ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ತರಕಾರಿ ವರ್ತಕರ ಅಂಗಡಿಗಳ ಮೇಲೆ ದಿಢೀರ್ ದಾಳಿ ನಿಷೇಧಿತ ಪ್ಲಾಸ್ಟಿಕ್ ಬಳುಸುತ್ತಿದ್ದವರ ಮೇಲೆ ದಂಡ ಹಾಕಿರುವ ಘಟನೆ ಹಿರಿಯೂರು ನಗರಸಭೆ ವ್ಯಾಪ್ತಿಯ ವೇದಾವತಿ ನಗರದಲ್ಲಿ ಜರುಗಿದೆ.

ಹಿರಿಯೂರು ನಗರ ವ್ಯಾಪ್ತಿಯಲ್ಲಿ ಪ್ರತಿ ಬುಧವಾರದಂತೆ ವಾರ್ಡ್ ನಂ 2100 ಫೀಟ್ ರಸ್ತೆಯಲ್ಲಿ ಸಂತೆ ಇದ್ದು ತರಕಾರಿ, ಈರುಳ್ಳಿ, ಸೊಪ್ಪು  ಮಾರಾಟಗಾರರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು 

ನಗರಸಭೆಯ ಆರೋಗ್ಯ ನೀರಿಕ್ಷಕರುಗಳಾದ ಸಂಧ್ಯಾ ವೈ. ಸ್, ಅಶೋಕ್ ಕುಮಾರ್, ನಯಾಜ್  ಮತ್ತು ಸ್ವಚ್ಛತಾ ಕಾರ್ಮಿಕರು ಜಂಟಿಯಾಗಿ  ಪರಿಶೀಲಿಸಿ ಸುಮಾರು 15 ಮಾರಾಟಗಾರರಿಗೆ 1850 ರೂ. ಗಳನ್ನು ದಂಡ ವಿಧಿಸಲಾಗಿರುತ್ತದೆ ಎಂದು  ಪೌರಾಯುಕ್ತ ಎ.ವಾಸೀಂ ತಿಳಿಸಿದ್ದಾರೆ.

- Advertisement - 

Share This Article
error: Content is protected !!
";