ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಆಕ್ಸಾನ್ ಕೇಬಲ್ಸ್ ವಿಸ್ತರಣೆ ಕುರಿತು ಚರ್ಚೆಯಾಗಿದ್ದು ‘ಮೇಕ್ ಇನ್ ಇಂಡಿಯಾ’ಗೆ ಬಲ ನೀಡಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಆಕ್ಸಾನ್ ಕೇಬಲ್ಸ್ ನ ಅಧ್ಯಕ್ಷರಾದ ಜೋಸೆಫ್ ಪುಜೊ ಅವರೊಂದಿಗೆ ಕರ್ನಾಟಕದಲ್ಲಿ ಕಂಪನಿಯ ನಿಖರ ಇಂಟರ್‌ಕನೆಕ್ಟ್ ಉತ್ಪಾದನಾ ವಿಸ್ತರಣೆಯ ಕುರಿತು ಮಹತ್ವದ ಸಭೆ ನಡೆಸಲಾಯಿತು.
ಅಂತರಿಕ್ಷ, ರಕ್ಷಣಾ ಹಾಗೂ ವಾಹನೋದ್ಯಮ ಕ್ಷೇತ್ರಗಳಿಗೆ ಉನ್ನತ ಕಾರ್ಯಕ್ಷಮತೆಯ ಕೇಬಲ್ ಮತ್ತು ಕನೆಕ್ಟರ್‌ಗಳನ್ನು ಪೂರೈಸುವ ಜಾಗತಿಕವಾಗಿ ಮುಂಚೂಣಿಯಲ್ಲಿರುವ AXON, AXON CONNECT, DHRUV ಮತ್ತು AXONGEN ಮೂಲಕ ಬೆಂಗಳೂರಿನಲ್ಲಿ ಬಲಿಷ್ಠ ಕಾರ್ಯಾಚರಣೆ ಹೊಂದಿದ್ದು , ನಮ್ಮ ರಾಜ್ಯದ ತಾಂತ್ರಿಕ ಸಾಮರ್ಥ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
‘ಮೇಕ್ ಇನ್ ಇಂಡಿಯಾ‘ ಉಪಕ್ರಮದಡಿ ಉನ್ನತ ತಂತ್ರಜ್ಞಾನ ಘಟಕಗಳ ಬೆಳವಣಿಗೆಗಿನ ಅವಕಾಶಗಳನ್ನು ಪರಿಶೀಲಿಸಲಾಯಿತು. ಆಕ್ಸಾನ್ ಕಂಪನಿಯ ಉತ್ಪಾದನಾ ಪ್ರಯಾಣ ಮತ್ತು ನಾವೀನ್ಯತೆ-ಆಧಾರಿತ ವಿಸ್ತರಣೆಗೆ ಅಗತ್ಯವಿರುವ ಸಂಪೂರ್ಣ ಬೆಂಬಲದ ಭರವಸೆ ನೀಡಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

