ಇಂಡಿಯಾ ಪೆವಿಲಿಯನ್ ನಲ್ಲಿ ಕರ್ನಾಟಕದ ಯಶೋಗಾಥೆಯ ಅನಾವರಣ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:ದಾವೋಸ್ :
ವಿಶ್ವ ಆರ್ಥಿಕ ವೇದಿಕೆ: ಇಂಡಿಯಾ ಪೆವಿಲಿಯನ್ ಉದ್ದೇಶಿಸಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಅವರು ಮಾತನಾಡಿದರು.
ನಮ್ಮ ರಾಜ್ಯದ ಶ್ರೀಮಂತ ಕೈಗಾರಿಕಾ ಮತ್ತು ಐತಿಹಾಸಿಕ ಪರಂಪರೆ
, ‘ಭಾರತದ ಸಿಲಿಕಾನ್ ವ್ಯಾಲಿಯಾಗಿ ಬೆಳೆದು ಬಂದ ಪ್ರಯಾಣ ಮತ್ತು ದೇಶದ ಅತ್ಯಂತ ವೈವಿಧ್ಯಮಯ ಉತ್ಪಾದನಾ ಹಬ್ ಆಗಿ ರೂಪುಗೊಂಡಿರುವ ನಮ್ಮ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಏರೋಸ್ಪೇಸ್ ಮತ್ತು ರಕ್ಷಣಾ ವಲಯ, ಎಲೆಕ್ಟ್ರಾನಿಕ್ಸ್, ವಿದ್ಯುತ್ ವಾಹನಗಳು, ಸ್ವಚ್ಛ ಇಂಧನ, ಬಯೋಟೆಕ್ ಮತ್ತು ಡೀಪ್ಟೆಕ್ ನಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ಬಲವಾದ MSME ಬುನಾದಿ, ಜಾಗತಿಕ R&D ಕೇಂದ್ರಗಳು ಮತ್ತು ನಾವೀನ್ಯದಿಂದ ಚಾಲಿತವಾದ ಉದ್ಯಮಗಳ ಬೆಂಬಲದೊಂದಿಗೆ, ಇಂದು ಜಾಗತಿಕ ಮಟ್ಟದ ಏರೋಸ್ಪೇಸ್ ಮತ್ತು ಅತ್ಯಾಧುನಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ.

- Advertisement - 

ವ್ಯಾಪಕ ಪ್ರತಿಭಾ ಸಂಪತ್ತು, ಜಾಗತಿಕ ಮಾನದಂಡದ ವೃತ್ತಿಪರ ಶಿಕ್ಷಣ, ಪ್ರಗತಿಶೀಲ ಕೈಗಾರಿಕಾ ನೀತಿಗಳು, ಸ್ಥಿರ ಅಭಿವೃದ್ಧಿಯತ್ತ ದೃಷ್ಟಿ, ಚೈತನ್ಯಭರಿತ ಸ್ಟಾರ್ಟ್ಅಪ್ ಪರಿಸರ ಮತ್ತು ಟಿಯರ್-2 ಮತ್ತು ಟಿಯರ್-3 ನಗರಗಳ ವೇಗವಾದ ಬೆಳವಣಿಗೆ ನಮ್ಮ ಮುಂದುವರಿದ ಬೆಳವಣಿಗೆಗೆ ಶಕ್ತಿ ನೀಡುತ್ತಿವೆ.

KWINCity, ಡೀಪ್ಟೆಕ್ ಪಾರ್ಕ್, ಸ್ವಿಫ್ಟ್ ಸಿಟಿ ಮತ್ತು ಸ್ಟಾರ್ಟ್ಅಪ್ ಪಾರ್ಕ್ ಸೇರಿದಂತೆ ಪ್ರಮುಖ ಯೋಜನೆಗಳು ಕರ್ನಾಟಕವನ್ನು ಭಾರತದ ಮುಂಚೂಣಿಯ ಜ್ಞಾನ ರಾಜಧಾನಿ ಮತ್ತು ಜಾಗತಿಕ ಹೂಡಿಕೆದಾರರ ಆದ್ಯತೆಯ ತಾಣವಾಗಿ ಮತ್ತಷ್ಟು ಬಲಪಡಿಸುತ್ತಿವೆ.

- Advertisement - 

ಈ ಎಲ್ಲಾ ಪ್ರಗತಿಯ ಕೇಂದ್ರದಲ್ಲಿ ದೊಡ್ಡ ಮಟ್ಟದ ಕೌಶಲ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಉದ್ಯೋಗ ಸೃಷ್ಟಿಗೆ ನಮ್ಮ ಬದ್ಧತೆ ಅಡಗಿದ್ದು, ಈ ಮೂಲಕ ರಾಜ್ಯದ ಜನತೆಗೆ ಸಮಗ್ರ ಮತ್ತು ಸುಸ್ಥಿರ ಸಮೃದ್ಧಿಯನ್ನು ಖಾತರಿಪಡಿಸುವುದು ನಮ್ಮ  ಗುರಿಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

 

Share This Article
error: Content is protected !!
";