ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಗಮಕ ಕಲಾಭಿಮಾನಿಗಳ ಸಂಘವು ತನ್ನ 40ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಆಯೋಜಿಸುತ್ತಿರುವ ಮಾಸಿಕ ಗಮಕ ವಾಚನ, ವ್ಯಾಖ್ಯಾನ ಸಂಭ್ರಮದ 30ನೇ ಕಾರ್ಯಕ್ರಮವು ಜನವರಿ-30 ರಂದು ಮಂಗಳವಾರ ಸಂಜೆ 6 ಗಂಟೆಗೆ ನಗರದ ಜೆ ಸಿ ಆರ್ ಬಡಾವಣೆಯ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ನಡೆಯಲಿದೆ.
ಅಂದಿನ ವಾಚನವನ್ನು ವಿದುಷಿ ಚಂಪಕಾ ಶ್ರೀಧರ್ ಚಿತ್ರದುರ್ಗ, ಇವರು ನಡೆಸಿಕೊಡಲಿದ್ದು, ವ್ಯಾಖ್ಯಾನವನ್ನು ವಿದ್ವಾನ್ ಅಚ್ಯುತ ಅವಧಾನಿಯವರು ಮತ್ತೂರು,ಇವರು ನಡೆಸಿಕೊಡಲಿದ್ದಾರೆ . ಕುಮಾರವ್ಯಾಸ ಭಾರತದ ಕಾವ್ಯದ”ಕಿರಾತಾರ್ಜುನೀಯ” ಪ್ರಸಂಗವಾಗಿರಲಿದೆ.
ಅಂದಿನ ಸಮಾರಂಭದ ದಿವ್ಯ ಸಾನಿಧ್ಯವನ್ನ ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳವರು ವಹಿಸಲಿದ್ದಾರೆಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು,ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಮಕ ಕಲೆಯನ್ನು ಪ್ರೋತ್ಸಾಹಿಸಲು ಸಹ ಕೋರಿದ್ದಾರೆ.

