ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಮಕ್ಕಳ ಶೈಕ್ಷಣಿಕ ಸಾಧನೆ ಜೊತೆಗೆ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯವಾಗಿರುತ್ತದೆ . ಈ ನಿಟ್ಟಿನಲ್ಲಿ ಪ್ರತಿ ವರ್ಷ ನಡೆಸುವ ವಾರ್ಷಿಕೋತ್ಸವ ಸಮಾರಂಭವು ವಿಶೇಷವಾಗಿರುತ್ತದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸ್ಕೈ ಎಜುಕೇಷನಲ್ ಟ್ರಸ್ಟ್ ಸದಾ ಶ್ರಮಿಸುತ್ತದೆ ಎಂದು ಲೋಕನಾಥ್ ಎಸ್.ಕೃಷ್ಣ ತಿಳಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸರ್ ಎಂ ವಿಶ್ವೇಶ್ವರಯ್ಯ ಆಂಗ್ಲ ಶಾಲೆ ಹಾಗೂ ಐ ಪ್ಲೇ ಐ ಲರ್ನ್ ಫೌಂಡೇಶನ್ ಶಾಲೆಯ ವಾರ್ಷಿಕೋತ್ಸವ(ಮಂಥನ-2026) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಮಕ್ಕಳಿಗೆ ಆಟದಿಂದ ಪಾಠವನ್ನು ಕಲಿಸುವ ವಿನೂತನ ಶಿಕ್ಷಣ ತಂತ್ರಗಳಲ್ಲಿ ಪರಿಣಿತಿ ಹೊಂದಿರುವ ಶಿಕ್ಷಕರ ತಂಡವನ್ನು ಹೊಂದಿರುವ ನಮ್ಮ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತಿದ್ದು ಶಿಕ್ಷಣಕ್ಕೆ ಸೀಮಿತವಾಗದೆ ಕ್ರೀಡೆ ವಿಜ್ಞಾನ ಸಂಸ್ಕೃತಿಗಳಲ್ಲಿ ಮಕ್ಕಳ ವಿಶೇಷ ಸಾಮರ್ಥ್ಯಗಳನ್ನು ಹೊರ ತರುವ ಮೂಲಕ ಸಾರ್ಥಕ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು .
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಅಶ್ವತಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ, ಡಾ. ಪಿ ಏಸ್ ಲಕ್ಷ್ಮಿ ನಾರಾಯಣ್, ಎಂ ನಾಗೇಶ್, ಸಿ ಆರ್ ಪಿ ಮುತ್ತುರಾಜ್ ಶಾಲೆಯ ಅಧ್ಯಕ್ಷರಾದ ಲೋಕನಾಥ್ ಏಸ್ ಕೃಷ್ಣ ಮೊದಲಾದ ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಪೋಷಕರು ಭಾಗವಹಿಸಿ ಕಾರ್ಯಕ್ರಮ ಹಾಗೂ ಶಾಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಸ್ತುತ ಸಾಲಿನ ಪರೀಕ್ಷೆಗಳು ಇನ್ನೇನು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಉಪನಿರ್ದೇಶಕರಾದ ಅಶ್ವತಮ್ಮ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಮಾತನಾಡಿ ಶಾಲೆಯಲ್ಲಿ ಪ್ರತಿ ಮಗುವಿಗೂ ವಿಶೇಷ ಗಮನ ಕೊಡುವ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯ ಎಲ್ಲಾ ಶಾಲೆಗಳಲ್ಲಿಯೂ ಆಗಬೇಕಿದೆ. ಉತ್ತಮ ಶೈಕ್ಷಣಿಕ ಬೆಳವಣಿಗೆ ಜೊತೆಜೊತೆಗೆ ಕಲೆ, ಸಂಸ್ಕೃತಿ, ಕ್ರೀಡೆ, ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಶ್ರಮ ಅತ್ಯಗತ್ಯ ಎಂದರು.
ಜನವರಿ 12ರಂದು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಸರ್. ಎಂ. ವಿಶ್ವೇಶ್ವರಯ್ಯ ಶಾಲೆಯ ಅಧ್ಯಕ್ಷರಾದ ಲೋಕನಾಥ್ ಎಸ್ ಕೃಷ್ಣ ಸ್ವಾಮಿ ರವರಿಗೆ. ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸ್ಫೂರ್ತಿ. 26 ಪ್ರಶಸ್ತಿ ಲಭಿಸಿದ್ದು, ಇವರ ಸಾಧನೆಯನ್ನು ಗುರುತಿಸಿ ದೊಡ್ಡ ಬಳ್ಳಾಪುರ ತಾಲೂಕು ಕ್ಷೇತ್ರ ಶಿಕ್ಷಣಧಿಕಾರಿಗಳಾದ ಶಂಕರಯ್ಯ ಹಾಗೂ ಬಿ. ಆರ್. ಸಿ. ನಾರಾಯಣ ಸ್ವಾಮಿ ರವರು ಲೋಕನಾಥ್ ಅವರನ್ನು ಸನ್ಮಾನಿಸಿದರು.
ಈ ವೇಳೆ ಡಾ. ಪಿ. ಎ ಸ್.ಲಕ್ಷ್ಮಿನಾರಾಯಣ್, ಎಂ ನಾಗೇಶ್, ಸಿ ಆರ್ ಪಿ ಮುತ್ತುರಾಜ್, ಕೆ.ವಿ.ಪಾಪಣ್ಣ, ಲತಾ ಹಾಗೂ ಸ್ಕೈ ಶಿಕ್ಷಣ ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು .

