ವಿಜೃಂಭಣೆಯಿಂದ ನಡೆದ ಹುಲುಕುಡಿ ವೀರಭದ್ರಸ್ವಾಮಿ ರಥೋತ್ಸವ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಹಣಬೆ ಪಂಚಾಯ್ತಿ ವ್ಯಾಪ್ತಿಯ  ಹುಲುಕುಡಿ ಬೆಟ್ಟದಲ್ಲಿ ಪ್ರತಿ ವರ್ಷದಂತೆ ರಥಸಪ್ತಮಿ ಸಂದರ್ಭದಲ್ಲಿ  ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮನವರ ಅದ್ದೂರಿ ರಥೋತ್ಸವ ನಡೆಯಿತು.

ರಥೋತ್ಸವದಲ್ಲಿ ಜಿಲ್ಲೆ ಹಾಗು ತಾಲ್ಲೂಕಿನಾದ್ಯಂತ  ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.

- Advertisement - 

ವೀರಗಾಸೆ ಕುಣಿತ, ಕಂಸಾಳೆ ಹಾಗೂ ಡೊಳ್ಳು ಕುಣಿತ ಜಾತ್ರೆಗೆ ಮೆರುಗು ನೀಡಿದವು. ಇದೇ ವೇಳೆ ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡಿ ದರ್ಶನ ಪಡೆದರು.

ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಮುಂಜಾನೆಯಿಂದ ಹೋಮ ಹಾಗೂ ವಿಶೇಷ ಪೂಜೆ, ಶನಿವಾರ ಸಂಜೆ ಉಯ್ಯಾಲೋತ್ಸವ, ವೀರಗಾಸೆ ಕುಣಿತ, ಅಗ್ನಿಕುಂಡ, ಅಕ್ಕಿ ಪೂಜೆ ಹಾಗೂ ದೀಪಾರಾಧನೆ ಕಾರ್ಯಕ್ರಮಗಳು ನಡೆದವು. ದೇವಾಲಯಕ್ಕೆ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

- Advertisement - 

ಹುಲುಕುಡಿ ಬೆಟ್ಟದ ಪ್ರಮುಖ ವಿಶೇಷಗಳು:
ವೀರಭದ್ರಸ್ವಾಮಿ ದೇವಾಲಯದೊಂದಿಗೆ ಬೆಟ್ಟದ ಸುತ್ತಲ ಸುಮಾರು 11 ದೇವಾಲಯಗಳು ಇದ್ದು
, ಬಯಲು ಸೀಮೆಯಲ್ಲಿನ ಕಾಡು, ಬೆಟ್ಟ-ಗುಡ್ಡಗಳ ವಾತಾವರಣದಿಂದಾಗಿ ಈ ಕ್ಷೇತ್ರ ಗಮನ ಸೆಳೆಯುತ್ತದೆ.

ಬೆಂಗಳೂರಿನಿಂದ ಕೇವಲ 70-75 ಕಿ.ಮೀ ದೊಡ್ಡಬಳ್ಳಾಪುರ ದಿಂಧ 13 ಕಿ.ಮೀ ದೂರದಲ್ಲಿನ ಹುಲುಕುಡಿ ಕ್ಷೇತ್ರದಲ್ಲಿ ಪುರಾಣದ ಕಾಲದಲ್ಲಿ ಅಗಸ್ತ್ಯ ಮುನಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಇವರ ಶಿಷ್ಯರು ಒಂದು ಹುಲ್ಲುಕುಡಿ ತಿಂದು ತಮ್ಮ ದೇಹವನ್ನು ನಿಗ್ರಹಿಸುತ್ತಿದ್ದರು. ಇಲ್ಲಿನ ಔಷಧಿ ಗುಣವುಳ್ಳ ಹುಲ್ಲು ದನಕರುಗಳ ಆರೋಗ್ಯಕ್ಕೆ ಒಳ್ಳೆಯದು. ಈ ಕಾರಣಗಳಿಂದ ಈ ಕ್ಷೇತ್ರಕ್ಕೆ ಹುಲುಕುಡಿ ಎಂಬ ಹೆಸರು ಬಂದಿದೆ ಎಂದು ಇಲ್ಲಿನ ಸ್ಥಳೀಯರು ವಿವರಿಸುತ್ತಾರೆ. 

ಹುಲುಕುಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶವನ್ನು ವಿಜಯನಗರ ಅರಸರ ಕಾಲಾವಧಿಯಲ್ಲಿ ಹುಲುಕುಡಿ ನಾಡು ಎಂದು ಕರೆಯುತ್ತಿದ್ದರು.

ರಥೋತ್ಸವ ಸಂದರ್ಭದಲ್ಲಿ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಅರವಿಂದ್ ಎನ್, ಸ್ವಾಮಿ ಲಿಂಗಾಪುರ, ಲಕ್ಷ್ಮಿಕಾಂತ್, ಚನ್ನೇಗೌಡ ಸೇರಿದಂತೆ ಇತರ ಸದಸ್ಯರು ಹಾಗು ಭಕ್ತರು ಹಾಜರಿದ್ದರು.

Share This Article
error: Content is protected !!
";