ಪುಸ್ತಕ ಪ್ರೇಮಿ ಅಂಕೇಗೌಡರಿಗೆ ಒಲಿದು ಬಂದ ಪದ್ಮಶ್ರೀ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪುರಸ್ಕಾರವನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಪೈಕಿ ರಾಜ್ಯದ ಗಣ್ಯರಲ್ಲಿ ಮಂಡ್ಯದ ಪುಸ್ತಕ ಪ್ರೇಮಿ ಅಂಕೇಗೌಡರು ಕೂಡ ಒಬ್ಬರು. ನಡೆದಾಡುವ ವಿಶ್ವಕೋಶ, ಪುಸ್ತಕ ಪ್ರೇಮಿ ಎಂದೇ ಖ್ಯಾತರಾದ ಅಂಕೇಗೌಡರ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪದ್ಮ ಶ್ರೀ ಗೌರವ ನೀಡಿದೆ.

ಅಂಕೇಗೌಡರ ಯಾರು?:
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದ ನಿವಾಸಿ ಅಂಕೇಗೌಡ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಮಯ ಪಾಲಕರಾಗಿ ನಿವೃತ್ತರಾಗಿರುವ ಅಂಕೇಗೌಡರು ಪುಸ್ತಕಗಳ ಮೇಲಿನ ಒಲವಿನಿಂದ ಪುಸ್ತಕಗಳ ದೊಡ್ಡ ಭಂಡಾರವನ್ನೇ ನಿರ್ಮಿಸಿದ್ದಾರೆ.

- Advertisement - 

ಪುಸ್ತಕಗಳು ನನ್ನ ಉಸಿರು, ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನನ್ನ ಕರ್ತವ್ಯ ಎನ್ನುವುದು ಅಂಕೇಗೌಡರ ಸಂದೇಶ. ಪಾಂಡವಪುರದಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಹರಳಹಳ್ಳಿಯಲ್ಲಿ ಪುಸ್ತಕದ ಮನೆ ನಿರ್ಮಾಣ ಮಾಡಿದ್ದು, ಇಲ್ಲಿ ಅಂದಾಜು 20 ಭಾಷೆಗಳ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ಹಲವು ವರ್ಷಗಳಿಂದ ಪುಸ್ತಕ ಸಂಗ್ರಹಿಸುತ್ತಾ ಬಂದಿರುವ ಇವರ ಬಳಿ ಎಲ್ಲಾ ವಿಷಯಗಳ ಮತ್ತು ಪ್ರಪಂಚದ ಎಲ್ಲಾ ಪ್ರಮುಖ ಗ್ರಂಥಗಳೂ ಇವೆ.

ದಶಕಗಳ ಶ್ರಮ:
ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಮೂಲಕ ಬೃಹತ್ ಖಾಸಗಿ ಪುಸ್ತಕ ಸಂಗ್ರಹಾಲಯವನ್ನು ಅಂಕೇಗೌಡರು ಸ್ಥಾಪಿಸಿದ್ದಾರೆ. ಕಳೆದ
5 ದಶಕಗಳಿಂದ ಪುಸ್ತಕ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
ಇವರ ಸಂಗ್ರಹದಲ್ಲಿ ಅಪರೂಪದ ಹಸ್ತಪ್ರತಿಗಳು ಮತ್ತು ವಿವಿಧ ಭಾಷೆಗಳ ಪುಸ್ತಕಗಳು
, 1,800ರ ದಶಕದ ಹಳೆಯ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಮೈಸೂರು ಒಡೆಯರ ಕಾಲದ ದಾಖಲೆಗಳಿವೆ.

- Advertisement - 

ಪುಸ್ತಕಗಳ ಮನೆ:
ಅಂಕೇಗೌಡರು ತಮ್ಮ ಮನೆಯನ್ನೇ ಗ್ರಂಥಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇವರ ಮನೆಯ ಅಂಗಳದಿಂದ ಹಿಡಿದು ಅಡುಗೆ ಮನೆಯವರೆಗೂ ಎಲ್ಲಿ ನೋಡಿದರೂ ಪುಸ್ತಕಗಳ ರಾಶಿಯೇ ಕಾಣುತ್ತದೆ.

ವಿದ್ಯಾರ್ಥಿ ಸಂಶೋಧಕರಿಗೆ ಅನುಕೂಲ:
ಲಕ್ಷಾಂತರ ಪುಸ್ತಕಗಳ ಭಂಡಾರದ ಮೂಲಕ ಓದಿಸುವ ಹಸಿವು ಇರುವವರಿಗೆ ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಜ್ಞಾನದಾಸೋಹ ಮಾಡುತ್ತಿದ್ದಾರೆ. ಅಂತೆಯೇ ಇವರ ಬಳಿ ಇರುವ ಪುಸ್ತಕ ಬಳಸಿಕೊಂಡು ನೂರಾರು ವಿದ್ಯಾರ್ಥಿಗಳು ತಮ್ಮ ಪಿ.ಹೆಚ್ ಡಿ ಪದವಿ ಪೂರೈಸಿದ್ದಾರೆ.

ಶಾಲಾ ದಿನಗಳಲ್ಲಿ ಗ್ರಂಥಾಲಯಕ್ಕೆ ಹೋದ ವೇಳೆ ಶಿಕ್ಷಕರು ಹೇಳಿದ ಮಾತಿನಿಂದ ಪ್ರೇರಣೆಗೊಂಡ ಅಂಕೇಗೌಡರು ಈ ಬೃಹತ್ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಮನಸ್ಸು ಮಾಡಿದ್ದರು. ಈಗಾಗಲೇ ಈ ಪುಸ್ತಕದ ಮನೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಕೊಂಡಿದೆ.

ಗೌಡರಿಗೆ ಸಿಕ್ಕ ಪ್ರಶಸ್ತಿಗಳು:
ಅಂಕೇಗೌಡರ ನಿಸ್ವಾರ್ಥ ಸೇವೆ ಗುರುತಿಸಿ ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳು ಸಂದಿವೆ. ಇದೀಗ ಕೇಂದ್ರ ಸರ್ಕಾರವು ದೇಶದ ಅತ್ಯುತ್ತನ ನಾಗರಿಕ ಪ್ರಶಸ್ತಿಗೂ ಆಯ್ಕೆ ಮಾಡಿ ಗೌರವಿಸಿದೆ. ಅಂಕೇಗೌಡರು ಕೇವಲ ಒಬ್ಬ ವ್ಯಕ್ತಿಯಲ್ಲ
, ಅವರು ನಡೆದಾಡುವ ವಿಶ್ವಕೋಶ. ಒಬ್ಬ ಸಾಮಾನ್ಯ ಸಕ್ಕರೆ ಕಾರ್ಖಾನೆಯ ಉದ್ಯೋಗಿಯಾಗಿ, ಸಾಹಿತ್ಯದ ಮೇಲಿನ ಅಪಾರ ಪ್ರೇಮದಿಂದ ಅವರು ನಿರ್ಮಿಸಿದ ಸಾಧನೆ ಅದ್ಭುತವಾಗಿದೆ ಎನ್ನುವ ಅಭಿಪ್ರಾಯ ಮತ್ತು ಹರ್ಷವಿದೆ.

Share This Article
error: Content is protected !!
";