ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಜವಾಹರ್ ನವೋದಯ ವಿದ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಂಧಿವಾದಿಗಳು ಹಾಗೂ ನಿವೃತ್ತ ಶಿಕ್ಷಕರಾದ ಲ. ನರಸಿಂಹಯ್ಯ ತೊಂಡೋಟಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ ದೇಶಕ್ಕೆ ಗಾಂಧೀಜಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸೇವೆ ,ತ್ಯಾಗ, ಬಲಿದಾನಗಳ ಬಗ್ಗೆ ಸ್ಮರಿಸಿ ಸರ್ವೋದಯದ ಮಹತ್ವ ಭವಿಷ್ಯದಲ್ಲಿ ತಾವುಗಳು ದೇಶ ಸೇವೆ ಮಾಡಲು ಮುಂದಿರಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ಕಂಸಾಳೆ ಮತ್ತು ಡೊಳ್ಳುಕುಣಿತ ಪ್ರದರ್ಶನಗಳನ್ನು ನೀಡಿ ರಂಜಿಸಿದರು.
ಕುಮಾರಿ ನಿತ್ಯಶ್ರೀ ಮತ್ತು ಭವಾನಿ ಅವರು ಸ್ವಾತಂತ್ರ್ಯ ಸಂಗ್ರಾಮದ ಹಾಗೂ ಸ್ವಾತಂತ್ರ್ಯಾ ನಂತರ ದೇಶದ ಸಾಧನೆಯ ಮೇಲೆ ಬೆಳಕು ಚೆ ಲ್ಲಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶ್ರೀ ಟಿ ಪಳನಿ ವೇಲು ಅವರು ದೇಶ ಸೇವೆಯೇ ತಮ್ಮ ಉದ್ದೇಶವಾಗಲಿ ಎಂದು ತಿಳಿಸಿದರು.
ಉಮಾ ಸ್ವಾಗತಿಸಿದರು. ಜೆ.ಪಿ ಉಪಾಧ್ಯೆ ಅತಿಥಿಗಳನ್ನು ಪರಿಚಯಿಸಿದರು. ಮೀರಾ ವಂದಿಸಿದರು. ಹರೀಶ್ ಅವರು ದೀಕ್ಷಾ ಬೋಧನೆ ಮಾಡಿದರು. ವೀರಣ್ಣ ಗೌಡ, ತಿಪ್ಪೇಸ್ವಾಮಿ, ಶಿಕ್ಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

