ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲಾ ಕುಂಚಿಟಿಗರ ಸಂಘ ಹಾಗೂ ಹಿರಿಯೂರು ತಾಲೂಕು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಆಯೋಜಿಸಿದ್ದ ತಮಿಳುನಾಡು ಕುಂಚಿಟಿಗರಿಗೆ ವೀಳ್ಯ ಸ್ವಾಗತ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಎಸ್ಎಸ್ಎಲ್ ಸಿ ಮತ್ತು ಪಿಯು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ತಮಿಳುನಾಡು ಕುಂಚಿಟಿಗರಿಗೆ ವೀಳ್ಯ ನೀಡುವ ಮೂಲಕ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಕೆ.ಎಸ್.ನವೀನ್ ರವರು ತಮಿಳುನಾಡು ಕುಂಚಿಟಿಗರಿಗೆ ಪ್ರಾರಂಭದಲ್ಲಿ ಎಲ್ಲರಿಗೂ ವಡಕ್ಕಂ ಎಂದು ಸಂಬೋಧಿಸಿ ತಮಿಳುನಾಡಿನ ಕುಂಚಿಟಿಗರು ತಮ್ಮ ಮೂಲ ಕುಲದೇವರ ದರ್ಶನ ಮಾಡಲು ಆಗಮಿಸಿರುವುದು ತುಂಬಾ ಸಂತೋಷ. ಹಾಗೂ ತಾವುಗಳು ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡು ಹೋಗಲು ವಿಧಾನ ಪರಿಷತ್ ಶಾಸಕ ನವೀನ್ ಮನವಿ ಮಾಡಿದರು.
ಈ ಸಂಬಂಧ ತಮಿಳುನಾಡು ಕುಂಚಿಟಿಗರನ್ನು ಕರ್ನಾಕಕ್ಕೆ ಕರೆ ತರುವಲ್ಲಿ ಮುಖ್ಯ ಪಾತ್ರ ವಹಿಸಿರುವ ಮುಖ್ಯ ಇಂಜಿನಿಯರ್ ಅಳನೇಷನ್ ರಂಗಸ್ವಾಮಿಯವರನ್ನು ಕರ್ನಾಟಕ ತಮಿಳುನಾಡಿಗೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿ ಅವರನ್ನು ಸ್ಮರಣೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹರಿಯಬ್ಬೆ ಮತ್ತು ಹುಚ್ಚವ್ವನಹಳ್ಳಿಯಲ್ಲಿರುವ ಕುಂಚಿಟಿಗರ ಜಾಗದಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ತಲಾ 3 ಕೋಟಿ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ಅಲ್ಲದೆ ವೈಯಕ್ತಿವಾಗಿಯೂ ಮತ್ತು ವಿಧಾನ ಪರಿಷತ್ ಅನುದಾನದಲ್ಲೂ ಕಟ್ಟಡ ನಿರ್ಮಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಇನ್ನೂ ಕುಂಚಿಟಿಗ ಸಮಾಜದ ಮೀಸಲಾತಿಗಾಗಿ ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದು ಶಾಸಕ ಕೆ.ಎಸ್ ನವೀನ್ ಭರವಸೆ ನೀಡಿದರು.
ಜೆಡಿಎಸ್ ಮುಖಂಡರು, ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಕುಂಚಿಟಿಗರು ತನ್ನ ಕುಲ ಉಳುವಿಗಾಗಿ ದೆಹಲಿಯಿಂದ ಕರ್ನಾಟಕದ ಹುಲಿಗೊಂದಿಗೆ ಆಗಮಿಸಿ ಅಲ್ಲಿಂದ ನಂದನಹೊಸೂರು ಮೂಲಕ ಕರ್ನಾಟಕ ಪ್ರವೇಶ ಮಾಡಿದ್ದಾರೆ. ಇಲ್ಲಿಂದ ಹೊಸೂರಿಗೆ ಮೂಲಕ ತಮಿಳುನಾಡು ಮಹಾರಾಷ್ಟ್ರ ರಾಜ್ಯಗಳತ್ತಲೂ ವಲಸೆ ಹೋಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ.
ಆದರೆ ತಮಿಳುನಾಡಿನ ಕುಂಚಿಟಿಗರ ಮೂಲ ಕಟ್ಟೆಮನೆ, ಮನೆ ದೇವರುಗಳು ಇಂದಿಗೂ ಕರ್ನಾಟಕದ ಚಿತ್ರದುರ್ಗ, ತುಮಕೂರು ಜಿಲ್ಲೆಯಲ್ಲಿವೆ. ಹಾಗಾಗಿ ಅವರು ತಮ್ಮ ಕುಲ ದೇವತೆಗಳ ದರ್ಶನಕ್ಕಾಗಿ ಕರ್ನಾಟಕಕ್ಕೆ ಪ್ರವಾಸ ಬಂದಿರುವುದು ತುಂಬಾ ಸಂತೋಷದ ವಿಚಾರ ಎಂದು ತಿ ಳಿಸಿದರು.
ಜಿಲ್ಲಾ ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಹೆಂಜಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಮತ್ತು ತಮಿಳುನಾಡು ಕುಂಚಿಟಿಗರು ಹೆಣ್ಣು ಗಂಡುಗಳನ್ನು ಕೊಟ್ಟು ಮದುವೆ ಮಾಡಿಕೊಳ್ಳುವ ಮೂಲಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಇಂಜಿನಿಯರ್ ಅಳಗೇಶನ್ ರಂಗಸ್ವಾಮಿ ಸನ್ಮಾನ ಸ್ವೀಕರಿಸಿ ತಮಿಳುನಾಡಿನಲ್ಲಿರುವ ಕುಂಚಿಟಿಗ ಕುಲಗಳ ಮಾಹಿತಿ ನೀಡಿ ಮಾತನಾಡಿ ಭಾಷೆಯ ತೊಡಕಿಗಾಗಿ ಮದುವೆ ಕಾರ್ಯಗಳು ನಡೆಯುತ್ತಿಲ್ಲ. ಸಮಾಜದಲ್ಲಿ ತಾವು ಜಾಗೃತಿ ಮೂಡಿಸುತ್ತೇವೆ. ಕರ್ನಾಟಕದರೂ ಜಾಗೃತಿ ಮೂಡಿಸಿ, ಹೆಣ್ಣು ಮತ್ತು ಗಂಡು ಇಬ್ಬರೂ ಒಪ್ಪಿದರೆ ಖಂಡಿತ ಮದುವೆ ಕಾರ್ಯಗಳನ್ನು ಮಾಡೋಣ ಎಂದು ತಿಳಿಸಿದರು.
ವಿಶ್ರಾಂತ ಬಿಬಿಎಂಪಿ ಡೆಪ್ಯೂಟಿ ಕಮಿಷನರ್ ಬೇತೂರುಪಾಳ್ಯ ಡಾ.ಜೆ.ರಾಜು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸನ್ಮಾನ- ರಾಜ್ಯ ಗುತ್ತಿಗೆದಾರರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿರುವ ಹಲಗಲದ್ದಿ ರಮೇಶ್ ರಾಮಣ್ಣ, ಮಲ್ಲಪ್ಪನಹಳ್ಳಿ ಎಂ.ಎನ್.ಹೇಮಂತ್ ಕುಮಾರ್, ಬೆಸ್ಕಾಂ ವಿಶ್ರಾಂತ ಹಿರಿಯ ಸಹಾಯಕ ಕೆ.ಗುಂಡಪ್ಪ(ಕೆಇಬಿ) ಇವರುಗಳು ಹಾಗೂ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಮಕ್ಕಳ ಪೋಷಕರು ಮತ್ತು ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚಂದ್ರವಳ್ಳಿ ಪ್ರದೇಶಿಕ ಪತ್ರಿಕೆ ವತಿಯಿಂದ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ.ಗಳ ನಗದು ಬಹುಮಾನ ನೀಡಲಾಯಿತು.
ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷ ಜಿ.ಚಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಕೆ ಗುಡ್ಡದ ಶ್ರೀಹಾಲಪ್ಪಯ್ಯ ಸ್ವಾಮಿ ಮಠದ ಎಂ.ವಿ ಚಂದ್ರಶೇಖರಯ್ಯ ಸಾನ್ನಿಧ್ಯ ವಹಿಸಿದ್ದರು.
ವಿಶ್ರಾಂತ ಡೀನ್ ಪ್ರೊ.ಎಂ.ಜಿ ಗೋವಿಂದಯ್ಯ, ಕೆ.ಬವಾಸವಾನಂದ, ಪ್ರೊ.ಮೈಸೂರು ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್ ರಘುನಾಥ್, ತಾಪಂ ಮಾಜಿ ಅಧ್ಯಕ್ಷೆ ಅರುಣಾ ಪಟೇಲ್, ಕೆ.ಟಿ ರುದ್ರಮುನಿ, ಸಿ.ಜಿ ಚಿಕ್ಕಣ್ಣ, ಹೆಚ್.ಜಿ ಗುಂಡಯ್ಯ ಮತ್ತಿತರರು ಹಾಜರಿದ್ದರು.
ಕುರುಬರಹಳ್ಳಿ ದೇವರಾಜ್ ಸ್ವಾಗತಿಸಿದರು. ಕೆ.ಜಿ ಹನುಮಂತರಾಯ ನಿರೂಪಿಸಿದರು.

