ಅಬಕಾರಿ ಅಧಿಕಾರಿಗಳ, ಲಿಕ್ಕರ್ ಸೇಲ್ಸ್ ಮ್ಯಾನ್ ಗಳ?

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಬಕಾರಿ ಅಧಿಕಾರಿಗಳ
, ಲಿಕ್ಕರ್ ಸೇಲ್ಸ್ ಮ್ಯಾನ್ ಗಳ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಹುಬ್ಬಳ್ಳಿ ಪ್ರವಾಸದ ವೇಳೆ ಅಬಕಾರಿ ಅಧಿಕಾರಿ ಪ್ರಕಾಶ್ ಪಾಟೀಲ್ ಅವರು ಮದ್ಯದ ಅಂಗಡಿಗಳಿಗೆ ಕಳಿಸಿರುವ ವಾಟ್ಸಾಪ್ ಸಂದೇಶ, ಈ ದಿವಾಳಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಬಕಾರಿ ಅಧಿಕಾರಿಗಳಿಗೆ ಮದ್ಯ ಮಾರಾಟ ಹೆಚ್ಚಿಸಲು ಯಾವ ಮಟ್ಟದ ಒತ್ತಡ ಹಾಕುತ್ತಿದೆ, ಎಷ್ಟು ಟಾರ್ಗೆಟ್ ನೀಡಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಅಶೋಕ್ ಟೀಕಿಸಿದರು.

- Advertisement - 

ಒಂದು ಕಡೆ ಅವೈಜ್ಞಾನಿಕ ಗ್ಯಾರೆಂಟಿಗಳು, ಭ್ರಷ್ಟಾಚಾರದಿಂದ ಖಜಾನೆ ಖಾಲಿ ಆಗಿದೆ. ಮತ್ತೊಂದು ಕಡೆ ಅಭಿವೃದ್ಧಿ ಇಲ್ಲದೆ, ಕಂದಾಯ ಇಲಾಖೆಯ ಎಡಟ್ಟುಗಳಿಂದ ತೆರಿಗೆ ಸಂಗ್ರಹ ಕುಸಿತಗೊಂಡಿದೆ.

ದಿವಾಳಿ ಆಗಿರುವ ಖಜಾನೆಯನ್ನ ತುಂಬಿಸಲು, ಹೈಕಮಾಂಡ್ ಜೋಳಿಗೆ ತುಂಬಿಸಲು, ಅಬಕಾರಿ ಅಧಿಕಾರಿಗಳಿಗೆ ಯದ್ವಾ ತದ್ವಾ ಟಾರ್ಗೆಟ್ ನೀಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ರಾಜ್ಯವನ್ನು ಮದ್ಯದ ಅಮಲಿನಲ್ಲಿ ತೇಲಿಸಲು ಹೊರಟಿದೆ.

- Advertisement - 

ಈ ಮಾನಗೆಟ್ಟ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರು ಇನ್ನೂ ಏನೇನು ಅನುಭವಿಸಬೇಕೋ ಆ ಭಗವಂತನೇ ಬಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ.

 

Share This Article
error: Content is protected !!
";