ತಿಮ್ಮಾಪುರ “ಕಮಿಷನ್‌” ಮತ್ತು “ಕಲೆಕ್ಷನ್‌” ದಂಧೆಗೆ ಮದ್ಯ ಮಾರಾಟಗಾರರು ಹೈರಾಣು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಬಕಾರಿ ಇಲಾಖೆಯ “ಮಂಥ್ಲಿ ಮನಿ ಮಿನಿಸ್ಟರ್‌” ಆರ್.ಬಿ. ತಿಮ್ಮಾಪುರ “ಕಮಿಷನ್‌” ಮತ್ತು “ಕಲೆಕ್ಷನ್‌” ದಂಧೆಗೆ ಮದ್ಯ ಮಾರಾಟಗಾರರು ಹೈರಾಣಾಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆ, ಭ್ರಷ್ಟಾಚಾರಕ್ಕೆ ಸಿಡಿದೆದ್ದಿರುವ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರು, ರಾಹುಲ್ ಗಾಂಧಿ, ಕಾಂಗ್ರೆಸ್‌ಹೈಕಮಾಂಡ್‌ಗೆ ದೂರು ನೀಡಲು ಮುಂದಾಗಿದ್ದಾರೆ. 

- Advertisement - 

ಮೊನ್ನೆಯಷ್ಟೇ ಬೆಂಗಳೂರು ಅಬಕಾರಿ ಡಿಸಿ 25 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆಯೇ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಬೇರೂರಿರುವ ಭ್ರಷ್ಟಾಚಾರಕ್ಕೆ ಹಿಡಿದಿರುವ ಕೈಗನ್ನಡಿ.  

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಿಮಗೆ ಕಿಂಚಿತ್ತಾದರೂ ಮಾನ, ಮರ್ಯಾದೆ ಉಳಿಸಿಕೊಂಡಿದ್ದರೇ, ಮೊದಲು ಭ್ರಷ್ಟ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್‌ಅವರನ್ನು ಸಂಪುಟದಿಂದ ಕಿತ್ತೊಗೆಯಿರಿ ಎಂದು ಜೆಡಿಎಸ್ ಆಗ್ರಹಿಸಿದೆ.

- Advertisement - 

 

 

Share This Article
error: Content is protected !!
";