ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಆರ್ಥಿಕ ವ್ಯವಸ್ಥೆ ಸತ್ತಿದೆ” ಎಂದು ವಿಷಕಾರುವ ಪಪ್ಪು ರಾಹುಲ್ ಗಾಂಧಿ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿ, ಭಾರತದ ಆರ್ಥಿಕ ವ್ಯವಸ್ಥೆ ಚೆನ್ನಾಗಿದೆ ಎಂದು ಒಪ್ಪಿಕೊಂಡಿದ್ದಾರೆಂದು ಜೆಡಿಎಸ್ ತಿಳಿಸಿದೆ.
ರಾಜಕೀಯಕ್ಕಾಗಿ ಹೊರ ದೇಶಗಳಲ್ಲಿ ನಮ್ಮ ದೇಶದ ವಿರುದ್ಧ ವಿಷಕಾರಿ, ಭಾರತವನ್ನು ಅಪಮಾನಿಸುವ ರಾಹುಲ್ ಗಾಂಧಿಗೆ ರಾಜಕೀಯ ಅನುಭವ ಕಮ್ಮಿ ಎಂದಿದ್ದಾರೆ ಜೆಡಿಎಸ್ ತಿಳಿಸಿದೆ.
ಮತ್ತೊಂದು ಕಡೆ EVM “ವೋಟ್ ಚೋರಿ” ಎಂದು ಸುಳ್ಳು ರಾಜಕೀಯ ಪ್ರಹಸನ ಮಾಡಿದ್ದ ರಾಹುಲ್ ಮತ್ತು ಕಾಂಗ್ರೆಸ್ಸಿಗರಿಗೆ ಡಿಕೆಶಿ ಸಹೋದರ ಡಿ.ಕೆ ಸುರೇಶ್, ಮತಪತ್ರ ಬಳಸಿದರೆ ಮತ್ತೆ ಓಬಿರಾರನ ಕಾಲಕ್ಕೆ ಹೋಗಬೇಕಾಗುತ್ತೆ ಎಂದು ಇವಿಎಂ ಪರವಾಗಿ ಧ್ವನಿಗೂಡಿಸಿದ್ದಾರೆ.
ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆಗಳಿಗೆ ಡಿಕೆ ಬ್ರದರ್ಸ್ ವಿರೋಧ ವ್ಯಕ್ತಪಡಿಸುತ್ತಿರುವುದು ಕಾಂಗ್ರೆಸ್ ಪಕ್ಷದ ದ್ವಂದ್ವಗಳನ್ನು ಅನಾವರಣಗೊಳಿಸಿದೆ ಎಂದು ತಿಳಿಸಿದ್ದಾರೆಂದು ಜೆಡಿಎಸ್ ಆರೋಪಿಸಿದೆ.

