ಎಗ್ಗಿಲ್ಲದೆ ನಡೆಯುತ್ತಿರುವ ಕಮಿಷನ್ ದಂಧೆ-ನಿಖಿಲ್  

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಬಕಾರಿ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕಮಿಷನ್ ದಂಧೆ, ಭ್ರಷ್ಟಾಚಾರದ ಬಗ್ಗೆ ಬೇಸತ್ತು ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ  ಎಸ್.ಗುರುಸ್ವಾಮಿ ಅವರು ಈ ಬಗ್ಗೆ ರಾಹುಲ್ ಗಾಂಧಿ ಅವರಿಗೆ ದೂರು ಕೊಡಲು ಮುಂದಾಗಿರುವ ನಡೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ನಾಚಿಕೆಗೇಡಿನ ವಿಷಯ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ ಅವರಿಗೆ ಈ ಬಗ್ಗೆ ದೂರು ನೀಡಿದರು ಕೂಡ ಮದ್ಯ ಮಾರಾಟಗಾರರಿಗೆ ಇದರಿಂದ ಯಾವುದೇ ಪ್ರಯೋಜನ ಆಗುವ ಸಾಧ್ಯತೆ ಇಲ್ಲ. ಕಾರಣ ವಸೂಲಿ ಮಾಡಲು ಆದೇಶ ಕೊಟ್ಟಿರೋದೇ ಹೈಕಮಾಂಟ್ ಆಗಿರುವುದರಿಂದ‌ಇನ್ನು ಅವರಿಂದ ಏನು ಪರಿಹಾರ ಸಿಗಲಿದೆ?

- Advertisement - 

ಎಲ್ಲ ರೀತಿಯಿಂದಲೂ ಲೂಟಿ ಹೊಡೆಯುತ್ತಿರುವ ಈ ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಗುತ್ತಿಗೆದಾರರ, ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಯಲ್ಲ. ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ, ಮರ್ಯಾದೆ ರಾಜ್ಯದ ಜನತೆಯ ಮೇಲೆ ಗೌರವವಿದ್ದರೆ ಈ ಕೂಡಲೇ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆ ಪಡೆಯಲಿ ಎಂದು ನಿಖಿಲ್ ಆಗ್ರಹಿಸಿದ್ದಾರೆ.

 

- Advertisement - 

 

Share This Article
error: Content is protected !!
";