ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಮೊಳಕಾಲ್ಮೂರು ಕ್ಷೇತ್ರದ ದೇವಸಮುದ್ರ ಗ್ರಾಮದಲ್ಲಿ ಸಂಘಟನಾ ಪರ್ವ ನಿಮಿತ್ತ ಕಾರ್ಯಕರ್ತರ ಸಭೆಯಲ್ಲಿ ಪ್ರಭಾಕರ ಮ್ಯಾಸನಾಯಕ ಅವರು ಭಾಗವಹಿಸಿ ಮಾತನಾಡಿದರು.
ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20 ಸೀಟುಗಳಿದ್ದು ಇಪ್ಪತ್ತನ್ನೂ ಗೆಲ್ಲಬೇಕು ಈ ನಿಟ್ಟಿನಲ್ಲಿ ಕಾರ್ಯಕರ್ತರು ಅದಮ್ಯ ವಿಶ್ವಾಸದೊಂದಿಗೆ ಚುನಾವಣೆಯಲ್ಲಿ ಭಾಗವಹಿಸಿ ಸಂಘಟನಾತ್ಮಕವಾಗಿ ಗಟ್ಟಿ ಪ್ರಯತ್ನ ಮಾಡಬೇಕೆಂದು ಅವರು ತಿಳಿಸಿದರು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಮೂರ್ತಿ, ಹಿರಿಯರಾದ ಜಿಂಕಲ್ ಬಸವರಾಜು, ಪರಮೇಶ್ವರಪ್ಪ, ಗುಂಡಪ್ಪ, ರವಿಸ್ವಾಮಿ, ಅನಿಲ್ ಕುಮಾರ್, ಬಲರಾಮ, ತಿಪ್ಪೇಸ್ವಾಮಿ, ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಹರೀಶ, ಪ್ರಭಾಕರ, ಮುಖಂಡರಾದ ತಿಮ್ಮಾರೆಡ್ಡಿ, ಹನುಮಂತು, ಶಿವಪ್ಪ, ಚಂದ್ರಣ್ಣ, ಬಸಣ್ಣ, ಹುಲ್ಲಪ್ಪ, ಸೋಮು, ಮಲ್ಲಿಕಣ್ಣ, ಬಸವರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

