ಅಧಿಕಾರಿಗಳ ವಿರುದ್ಧ ಬೆದರಿಕೆ ಆರೋಪ : ಸಾರ್ವಜನಿಕರ ಆಕ್ರೋಶ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಕೀಲರೊಬ್ಬರು ಉಪ ವಿಭಾಗಾಧಿಕಾರಿಗಳಿಗೆ ಬೆದರಿಕೆ ಹಾಕಿರುವ ಘಟನೆ  ದೊಡ್ಡಬಳ್ಳಾಪುರ ತಾಲೂಕಿನ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 ಜನವರಿ-27ರ ಮಂಗಳವಾರ ಬಾಕಿ ಕಡತಗಳ ವಿಲೇವಾರಿ ಹಾಗೂ ಆದೇಶ ಜಾರಿ ಕುರಿತಂತೆ ನಡೆದ ಸಭೆಯಲ್ಲಿ ವಕೀಲರೊಬ್ಬರು ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅವರನ್ನು ಏಕವಚನದಿಂದ ಬೈದು, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. 

- Advertisement - 

ಅಲ್ಲದೇ ನಾನು ಶಾಸಕರಿಗೆ ಆಪ್ತನಾಗಿದ್ದು ನಿಮಗೇನು ಮಾಡಬೇಕೆಂದು ತಿಳಿದಿದೆ ನೀವೇನು ಮಾಡಲು ಸಾಧ್ಯ ಮಾಡಿಕೊಳ್ಳಿ ಎಂದಿದ್ದಾರೆ.

 ಮಹಿಳೆಯರು ಸಾರ್ವಜನಿಕ ವಲಯದಲ್ಲಿ ಕರ್ತವ್ಯ ನಿರ್ಮಿಸುವುದೇ ಕಷ್ಟಕರ ಅಂತಹ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ವಿಭಾಗಾಧಿಕಾರಿಗಳಾಗಿ ಕರ್ತವ್ಯ ನಿರ್ಮಿಸುತ್ತಿರುವ  ಮಹಿಳಾ ಅಧಿಕಾರಿ ಮೇಲೆ ಈ ರೀತಿ ಬೆದರಿಕೆ ಹಾಕಿದರೆ ಮಹಿಳಾ ಸಿಬ್ಬಂದಿ ಕೆಲಸ ಮಾಡುವುದಾದರೂ ಹೇಗೆ  ವಕೀಲರು ಸಮಾಜದ ಪ್ರಜ್ಞಾವಂತರಾಗಿರುತ್ತಾರೆ.

- Advertisement - 

  ಅವರೇ  ಹೀಗೆ ನಡೆದುಕೊಂಡರೆ ಹೇಗೆ ಇಂತಹ ನಡವಳಿಕೆಗಳು ಮುಂದೆ ನಡೆಯದಂತೆ  ನೋಡಿಕೊಳ್ಳಬೇಕು . ಅಧಿಕಾರಿಗಳು ಯಾವುದೇ ಒತ್ತಡವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸಲು ನಾವೆಲ್ಲರೂ ಸಹಕರಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

 

Share This Article
error: Content is protected !!
";