ಆಂಧ್ರ ಸರ್ಕಾರದ 10 ಕೋಟಿ ಹಿಡಿದುಕೊಂಡ ರಾಜ್ಯ ಸರ್ಕಾರ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತುಂಗಭದ್ರಾ ಅಣೆಕಟ್ಟೆ ಕ್ರೆಸ್ಟ್‌ಗೇಟ್ ಬದಲಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಸಂಬಳ
, ಸಾರಿಗೆ, ಇತರೆ ವೆಚ್ಚಗಳಿಗೆ ಆಂಧ್ರ ಸರ್ಕಾರ ಬಿಡುಗಡೆ ಮಾಡಿದ್ದ 35.62 ಕೋಟಿಯಲ್ಲಿ 10 ಕೋಟಿಯನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಡಿದಿಟ್ಟುಕೊಂಡಿರುವುದು ನಾಚಿಕೆಗೇಡು ಎಂದು ಜೆಡಿಎಸ್ ತೀವ್ರ ವಾಗ್ದಾಳಿ ಮಾಡಿದೆ.

ಕರ್ನಾಟಕ ಸರ್ಕಾರ 10 ಕೋಟಿ ವಾಪಸು ಪಡೆದಿದೆ ಎಂದು ಜನವರಿ 22ರಂದು ಕ್ರಸ್ಟ್‌ಗೇಟ್ ಅಳವಡಿಕೆ ತಜ್ಞ ಕನ್ನಯ್ಯ ನಾಯ್ಡು ಆರೋಪಿಸಿದ್ದರು. ಇದಕ್ಕೆ ಸಾಕ್ಷಿಯಾಗಿ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ಅವರು, ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಪತ್ರವನ್ನು ಉಲ್ಲೇಖಿಸಿದ್ದಾರೆ.

- Advertisement - 

ಇಷ್ಟಾದರೂ ಕಾಂಗ್ರೆಸ್‌ಸರ್ಕಾರದ ಬೇಜವಾಬ್ದಾರಿ ಹಾಗೂ ಸಚಿವ ಶಿವರಾಜ್ ತಂಗಡಗಿ ಭಂಡತನ ಮುಂದುವರಿಸಿದ್ದಾರೆ. ತುಂಗಭದ್ರಾ ಅಣೆಕಟ್ಟೆಯ ಗೇಟ್‌ಅಳವಡಿಕೆ ಕಾರ್ಯದಲ್ಲಿ ವಿಳಂಬ ಹಾಗೂ ಬಲದಂಡೆ ಕಾಲುವೆಗಳ ನಿರ್ವಹಣೆ ಕುಂಠಿತವಾಗಲಿದೆ ಎಂದು ರೈತರು ಕಾಂಗ್ರೆಸ್‌ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಜೆಡಿಎಸ್ ದೂರಿದೆ.

- Advertisement - 
Share This Article
error: Content is protected !!
";