ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್‌ಫ್ಯಾಕ್ಟರಿ ಪತ್ತೆ ಹಚ್ಚಿದ ದೆಹಲಿ ಎನ್ ಸಿಬಿ ಪೊಲೀಸರು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರಿನಲ್ಲಿ ಮತ್ತೊಂದು ಡ್ರಗ್ಸ್‌ತಯಾರಿಕಾ ಫ್ಯಾಕ್ಟರಿಯನ್ನು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ದೆಹಲಿಯ ಎನ್‌ಸಿಬಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ. 

ಮಹಾರಾಷ್ಟ್ರ ಪೊಲೀಸರ ಬಳಿಕ ಈಗ ದೆಹಲಿ “ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ” ತಂಡವು, ಮೈಸೂರು ನಗರ ಪೊಲೀಸರಿಗೆ ಸಣ್ಣ ಸುಳಿವು ನೀಡದೆ ಡ್ರಗ್ಸ್‌ಫ್ಯಾಕ್ಟರಿ ಮೇಲೆ ದಾಳಿ ನಡೆಸಿದೆ. 

- Advertisement - 

ದೇಶವೆ ಬೆಚ್ಚಿ ಬೀಳವಂತಹ “ಡ್ರಗ್ಸ್ ಫ್ಯಾಕ್ಟರಿ”ಗಳು ಸಾಂಸ್ಕೃತಿಕ ನಗರಿಯಲ್ಲಿ ಅದರಲ್ಲೂ, ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ತಲೆ ಎತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ. 

ಡ್ರಗ್ಸ್‌ಜಾಲವನ್ನು ಪತ್ತೆ ಹಚ್ಚುವಲ್ಲಿ ರಾಜ್ಯದ ಪೊಲೀಸರು ಮತ್ತೆ ಎಡವಿರುವುದು ರಾಜ್ಯದ ಗುಪ್ತಚರ ಇಲಾಖೆ ಹಾಗೂ ಗೃಹ ಇಲಾಖೆಯ ವೈಫಲ್ಯವನ್ನು ಎದ್ದು ತೋರಿಸುತ್ತಿದೆ.

- Advertisement - 

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಇಷ್ಟೆಲ್ಲ ಮಾದಕ ವಸ್ತು ತಯಾರಿಕಾ ಘಟಕಗಳು ರಾಜ್ಯಾದ್ಯಂತ ಹರಡಿಕೊಂಡಿದ್ದರೂ, “ಅದರ ಬಗ್ಗೆ ಮಾಹಿತಿ ಇಲ್ಲ” ,  “ನನಗೇನು ಗೊತ್ತಿಲ್ಲ” ಎನ್ನುವ ಡಾ.ಜಿ ಪರಮೇಶ್ವರ ಅವರನ್ನು ಗೃಹ ಸಚಿವರನ್ನಾಗಿ ಪಡೆದಿರುವುದು ಕನ್ನಡಿಗರ ದುರ್ದೈವ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

 

 

Share This Article
error: Content is protected !!
";