ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತನ ಪತ್ನಿ, ಆಕೆಯ ಪ್ರಿಯಕರನ ಬಂಧಿಸಿದ ಪೊಲೀಸರು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಆತ್ಮಹತ್ಯೆ ಪ್ರಕರಣದಲ್ಲಿ ನವ ವಿವಾಹಿತ ಸೇರಿದಂತೆ ಇಬ್ಬರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.  ಬಂಧಿತ ಆರೋಪಿ ಕುಮಾರ್ ಅಲಿಯಾಸ್ ಶಿವಕುಮಾರ್.

ತನ್ನ ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದು ಪತಿ ಹರೀಶ್ (30) ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ತಿಳಿದು ತಾನು ಮಾಡಿಸಿದ ಮದುವೆ ಹೀಗಾಯಿತಲ್ಲ ಎಂದು ಕೊರಗಿ ಪತ್ನಿಯ ಸೋದರ ಮಾವ ರುದ್ರೇಶ್(36) ಎಂಬವರೂ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರ ಸಾವಿಗೆ ಶಿವಕುಮಾರ್ ಕೂಡ ಕಾರಣನಾಗಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು.

- Advertisement - 

ಏನಿದು ಪ್ರಕರಣ:
ಆನೆಕೊಂಡ ಗ್ರಾಮದ ಸರಸ್ಪತಿ ಎಂಬವರನ್ನು ಗುಮ್ಮನೂರು ಗ್ರಾಮದ ಹರೀಶ್ ಎರಡೂವರೆ ತಿಂಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ಬಳಿಕ ಒಂದು ದಿನ ದೇವಾಲಯಕ್ಕೆ ಹೋಗಿ ಬರುತ್ತೇನೆಂದು ಹೋದ ನವ ವಿವಾಹಿತೆ ಸರಸ್ಪತಿ
, ಕುಮಾರ್ ಅಲಿಯಾಸ್ ಶಿವಕುಮಾರನ ಜತೆ ಪರಾರಿಯಾಗಿದ್ದು, ಇದರಿಂದ ನೊಂದು ಪತಿ ಹರೀಶ್ ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.
ಈ ವಿಷಯ ತಿಳಿದು ಪತ್ನಿಯ ಸೋದರ ಮಾವ ರುದ್ರೇಶ್ ಕೂಡ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇಬ್ಬರ ಸಾವಿಗೆ ಕಾರಣವಾದ ಸರಸ್ಪತಿ, ಕುಮಾರ ಸೇರಿದಂತೆ ಆಕೆಯ ಕುಟುಂಬಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹರೀಶ್ ಕುಟುಂಬಸ್ಥರು ದಾವಣಗೆರೆ ಗ್ರಾಮಾಂತರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

- Advertisement - 

ಸರಸ್ವತಿ ಹಾಗೂ ಕುಮಾರ್ ಇವರಿಬ್ಬರೂ ಹರೀಶ್ ಮತ್ತು ರುದ್ರೇಶ್ ಸಾವಿಗೆ ಕಾರಣರಾಗಿದ್ದಾರೆ. ನಾನು ಪ್ರೀತಿಸಿದ ಹುಡುಗಿಯನ್ನು ಹೇಗೆ ಮದುವೆ ಮಾಡಿಕೊಂಡೆ ಅಂತೆಲ್ಲ ಕುಮಾರ್​, ಹರೀಶನಿಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಜೀವ ಬೆದರಿಕೆಯಿಂದಲೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಎಂದು ಹರೀಶ್ ಪೋಷಕರು ಆರೋಪಿಸಿ ದೂರು ನೀಡಿದ್ದರು.

ಪೊಲೀಸರು ಪ್ರಕರಣದ ಗಂಭೀರತೆ ಅರಿತು ಎಲೆಬೇತೂರಿನಲ್ಲಿ ಬುಧವಾರ ಸರಸ್ವತಿಯನ್ನು ಬಂಧಿಸಿದ್ದರು.‌
ಹಳೇ ಕಡ್ಲೆಬಾಳು ಗ್ರಾಮದ ಬಳಿ ಆಕಯ ಪ್ರಿಯಕರ ಕುಮಾರನನ್ನೂ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಡೆತ್​ ನೋಟ್​:
ಪತ್ನಿ ಬೇರೆಯವನೊಂದಿಗೆ ಹೋಗಿದ್ದರೂ ನನಗೆ ಬೆದರಿಕೆ ಹಾಕಲಾಗುತ್ತಿತ್ತು. ನನಗೆ ಹಣ ಆಸ್ತಿಗಿಂತ ಮಾನ
, ಮರ್ಯಾದೆ ಮುಖ್ಯ. ಹಾಗಾಗಿ ಇಂಥವರ ವಿರುದ್ಧ ನಮ್ಮ ಸಂವಿಧಾನ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಇದೆ. ಸರಸ್ವತಿ ಸೇರಿ ಮೂವರು ನನ್ನ ಸಾವಿಗೆ ಕಾರಣರು ಎಂದು ಹರೀಶ್​​ ಆತ್ಮಹತ್ಯೆಗೆ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್​ ಪತ್ತೆಯಾಗಿ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Share This Article
error: Content is protected !!
";