ಸಿಎಂ ಆಪ್ತ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ?

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಎದ್ದಿರುವ ಗೊಂದಲದ ಮಧ್ಯೆ ಸಿಎಂ ಆಪ್ತ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಕರ್ನಾಟಕದಲ್ಲಿ ಭಾರಿ ಸಂಚಲನ ಮೂಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಇಂಥಾದ್ದೊಂದು ಅತಿದೊಡ್ಡ ಬೆಳವಣಿಗೆ ಬಯಲಾಗಿದೆ.

ವಿಧಾನಸಭೆಯಲ್ಲೂ ರಾಜೀನಾಮೆ ಸುದ್ದಿ ದೊಡ್ಡ ಸದ್ದು ಮಾಡಿದೆ. ತಮ್ಮ ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಬೇಸರಗೊಂಡು ಸಚಿವ ಕೆ.ಜೆ.ಜಾರ್ಜ್ ಬೇಸರಗೊಂಡಿದ್ದು, ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿದ್ದು ಸಚಿವ ಜಾರ್ಜ್ ಅವರು ರಾಜೀನಾಮೆ ನೀಡಿರುವುದನ್ನ ಅಲ್ಲಗಳೆದಿದ್ದಾರೆ.

- Advertisement - 

ಸಚಿವ ಜಾರ್ಜ್ ಅವರು ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಡಾ.ಯತೀಂದ್ರ ಇಂಧನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಿಧಾನಸಭೆಯಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ.

ಒಬ್ಬ ಸಚಿವರು ರಾಜೀನಾಮೆ ನೀಡುವುದು ಅಷ್ಟು ಸುಲಭವೇ? ನಾನು ಯಾವುದೇ ಅಧಿಕಾರಿ ವಿಚಾರದಲ್ಲಿ ಪಟ್ಟು ಹಿಡಿಯಲ್ಲ. ಡಾ.ಯತೀಂದ್ರ ಒಳ್ಳೆಯವರು. ಅವರಿಗೆ ಯಾಕೆ ಕೆಟ್ಟ ಹೆಸರು? ಎಂದು ಸಚಿವರು ಸ್ಪಷ್ಟಪಡಿಸಿದರು.

- Advertisement - 

 

Share This Article
error: Content is protected !!
";