ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಕಳ್ಳರ ಕಾಟ ತಪ್ಪಿಸಿಕೊಳ್ಳಲು ರೈತನೊಬ್ಬ ತಮ್ಮ ಅಡಿಕೆ ತೋಟವಿರುವ ಜಮೀನಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.
ಇದೀಗ ಕಳ್ಳರನ್ನು ಪತ್ತೆ ಮಾಡಲು ಹಾಗೂ ಅಡಿಕೆಗೆ ಟೈಟ್ ಸೆಕ್ಯುರಿಟಿ ನೀಡಲು ರೈತರು ಹೊಸ ಪ್ಲಾನ್ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ತಡೆಗೆ ರೈತರ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಅಡಿಕೆ ತೋಟಕ್ಕೆ ಇದೀಗ ಸಿಸಿಟಿವಿ ಕ್ಯಾಮೆರಾ ಬಂದಿದೆ. ಅಡಿಕೆ ತೋಟದಲ್ಲಿ ಅಪರಿಚಿತರ ಓಡಾಟ ನಡೆಸಿದರೆ ಲೈನ್ ಆನ್ ಮೂಲಕ ಮಾಲೀಕರ ಮೊಬೈಲ್ ಗೆ ಸಂದೇಶ ಕಳುಹಿಸುವ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಸಿಸಿ ಟಿವಿ ಕ್ಯಾಮೆರಾಕ್ಕೆ ಕನಿಷ್ಟ ಮೂವತ್ತು ದಿನ ವಿಡಿಯೋ ಸ್ಟೋರೇಜ್ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

