ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆಯಲ್ಲಿ ಮಾಡುತ್ತಿರುವ ಹಸ್ತಕ್ಷೇಪದಿಂದ ಸಚಿವ ಕೆಜೆ ಜಾರ್ಜ್‌ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಿದೆ.
ಈ ವಿಚಾರವಾಗಿ ಸಚಿವ ಜಾರ್ಜ್‌ಸದನದಲ್ಲೇ ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷದ ನಾಯಕರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಇಂಧನ ಜಾರ್ಜ್, ತಮ್ಮ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸಿಲ್ಲ. ಮುಖ್ಯಮಂತ್ರಿಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅವರಿಗೆ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಜಾರ್ಜ್ ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಸೃಷ್ಟಿಸುತ್ತಿವೆ ಎಂದು ಆರೋಪಿಸಿದರು. ಹಳೆಯ ಕಾಲದಲ್ಲಿ ದಿನಕ್ಕೆ ಮೂರು ಸುದ್ದಿ ಪ್ರಸಾರವಾಗುತ್ತಿತ್ತು, ಈಗ ಪ್ರತಿ ಗಂಟೆಗೂ ಬ್ರೇಕಿಂಗ್‌ನ್ಯೂಸ್‌ಬೇಕಾಗಿದೆ. ಹೀಗಾಗಿ ಮಾಧ್ಯಮಗಳು ಸೃಷ್ಟಿ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜೀನಾಮೆ ನೀಡುವ ಯಾವುದೇ ಪ್ರಶ್ನೆಯೂ ಇಲ್ಲ, ಇದು ಕೇವಲ ವದಂತಿ ಎಂದು ಸಚಿವ ಜಾರ್ಜ್‌ಸದನಕ್ಕೆ ತಿಳಿಸಿದರು.

