ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದಹೊರವಲಯದ ಪಾಲನ ಜೋಗಿಹಳ್ಳಿಯ ಮನೆಯೊಂದರ ಬಳಿ ಡ್ರೋಣ್ ಬಿದ್ದಿರುವ ಘಟನೆ ನಡೆದಿದೆ.
ಇಂಜಿನಿಯರ್ ವ್ಯಾಸoಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮ ಕೋಲ್ ಬಳಸಿ ತಯಾರಿಸಿದ್ದೆಂದು ಶಂಕಿಸಲಾಗಿರುವ ವಿಮಾನ ಮಾದರಿಯ ಸುಮಾರು ಏಳು ಅಡಿ ಉದ್ದ ನಾಲ್ಕು ಅಡಿ ಅಗಲದ ಡೋನ್ ಒಂದು ನಗರದ ಹೊರವಲಯದ ಪಾಲನ ಜೋಗಹಳ್ಳಿಯ ಮನೆಯ ಮುಂದೆ ಬಿದ್ದಿರು ಕಾರಣ ಅನುಮಾನಕ್ಕೆ ಕಾರಣವಾಗಿದೆ.
ಜ. 29ರಂದು ಸುಮಾರು ನಾಲ್ಕು ಘಂಟೆಯ ಸಮಯದಲ್ಲಿ ಹಾರುತ್ತಾ ಬಂದ ವಿಮಾನ ಮಾದರಿಯ ವಸ್ತು ಏಕಾಏಕಿ ನೆಲಕ್ಕೆ ಬಿದ್ದಿದ್ದನ್ನು ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಡೋನ್ ಅನ್ನು ವಶಕ್ಕೆ ಪಡೆದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಗಳು ಬಾಂಬ್ ನಿಷ್ಕ್ರಿಯ ದಳ,ಸೋಕೊ ತಂಡ ಸೇರಿದಂತೆ ಎಲ್ಲ ತಜ್ಞರ ತಂಡ ಆಗಮಿಸಿ ಹಲವು ಗಂಟೆಗಳ ಕಾಲ ಡ್ರೋನ್ ಮಾದರಿಯ ವಸ್ತುವನ್ನು ಪರಿಶೀಲನೆ ನಡೆಸಿದರು .
ಥರ್ಮಕೋಲ್ ಬಳಸಿ ವಿಮಾನ ಮಾದರಿಯಲ್ಲಿ ತಯಾರಿಸಲಾಗಿದೆ, ಬ್ಯಾಟರಿ ಸೇರಿದಂತೆ ಎಲೆಕ್ಟ್ರಿಕ್. ವೈರ್ಗಳು ಅಳವಡಿಸಲಾಗಿದ್ದವು ಎನ್ನಲಾಗಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿ ಪರೀಕ್ಷಾರ್ಥವಾಗಿ ಹಾರಿಸಿದ ವೇಳೆ ಸಂಪರ್ಕ ಕಡಿತಗೊಂಡು ಡ್ರೋ ಣ್ ಬಿದ್ದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೋನ್ ಯಾರಿಂದ, ಯಾವ ಉದ್ದೇಶಕ್ಕಾಗಿ ಹಾರಿಸಲಾಗಿತ್ತು ಎಂಬ ಕುರಿತು ಉನ್ನತ ಮಟ್ಟದಲ್ಲಿ ತನಿಖೆ ಮುಂದುವರಿದಿದೆ. ಅಲ್ಲದೆ ಆ ವಸ್ತುವನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ.
ಸಾರ್ವಜನಿಕರು ಅಧಿಕೃತವಲ್ಲದ ಸುದ್ದಿಗಳಿಗೆ ಕಿವಿಗೊಟ್ಟು ಆತಂಕ ಮತ್ತು ಗೊಂದಲಕ್ಕೆ ಒಳಗಾಗದೆ, ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಪೊಲೀಸರು ಮನವಿ ಮಾಡಿದ್ದಾರೆ.

