ಕಸಾಪ ಸಮ್ಮೇಳನಾಧ್ಯಕ್ಷರಾಗಿ ಮಲ್ಲಪ್ಪನಹಳ್ಳಿ ಎಂ.ಜಿ ರಂಗಸ್ವಾಮಿ ಆಯ್ಕೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ.7ರಂದು ನಡೆಯುವ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಸಾಹಿತಿ, ಹಿರಿಯ ಪತ್ರಕರ್ತ ಮಲ್ಲಪ್ಪನಹಳ್ಳಿ ಎಂ.ಜಿ ರಂಗಸ್ವಾಮಿಯವರನ್ನು ಆಯ್ಕೆ ಮಾಡಲಾಗಿದೆ.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರಪ್ಪನವರ ಅಧ್ಯಕ್ಷತೆ ಯಲ್ಲಿ ನಗರದ ವೀನಸ್ ಹಾಲಿನಲ್ಲಿ ನಡೆದ ಸಭೆಯಲ್ಲಿ ಈ ಮಹತ್ವಪೂರ್ಣ ನಿರ್ಧಾರ ಕೈಗೊಂಡು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎಂ.ಜಿ. ರಂಗಸ್ವಾಮಿ ಹೆಸರನ್ನು ಘೋಷಿಸಲಾಯಿತು.

- Advertisement - 

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಜಿ.ಪ್ರೇಮ್ ಕುಮಾರ್, ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಸಕ್ಕರ ರಂಗಸ್ವಾಮಿ, ಮಹಮ್ಮದ್ ಫಕ್ರುದ್ದೀನ್, ಗೌರವ ಕಾರ್ಯದರ್ಶಿಗಳಾದ ಎಚ್. ಕೃಷ್ಣಮೂರ್ತಿ, ಜೆ ನಿಜಲಿಂಗಪ್ಪ, ಕಸಬಾ ಹೋಬಳಿ ಅಧ್ಯಕ್ಷ ಪೊಲೀಸ್ ಬೇಟೆ ಪ್ರಸನ್ನ, ಧರ್ಮಪುರ ಹೋಬಳಿ ಅಧ್ಯಕ್ಷ ಅಶೋಕ್, ಬಸವರಾಜು, ರೈತ ಮುಖಂಡ ಹೊರಕೇರಪ್ಪ ಪ್ರಹ್ಲಾದ್‌, ಚಂದ್ರಶೇಖರಯ್ಯ, ಶಫಿವುಲ್ಲಾ, ವೇದ ಪುಷ್ಪ, ಅಂಬಿಕಾ, ರಂಗಧಾಮಯ್ಯ, ಗಡಾರಿಕೃಷ್ಣಪ್ಪ, ಮಾರುತೇಶ್, ಈರಣ್ಣ ಹಾಜರಿದ್ದರು.

 ಸಮ್ಮೇಳನ ಅಧ್ಯಕ್ಷರ ಪರಿಚಯ:
7
ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಎಂ.ಜಿ. ರಂಗಸ್ವಾಮಿವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ದಿ.25.03.1962 ರಂದು ತಂದೆ ಆರ್.ಗುಡುದಯ್ಯ ಶಿಕ್ಷಕರು, ತಾಯಿ ಎಂ.ರಂಗಮ್ಮನವರ 3ನೇ ಪುತ್ರನಾಗಿ ಜನಿಸಿದರು.

- Advertisement - 

ಸ್ವಗ್ರಾಮ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ತುಮಕೂರಿನ ಸಿದ್ಧಗಂಗಾ ಮಠ, ಮೈಸೂರು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ, ಮಾನಸಗಂಗೋತ್ರಿಯಲ್ಲಿ ಡಿಪ್ಲೊಮಾ-ಇನ್-ಇಂಗ್ಲಿಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ ಪದವಿ. ಮೂವತ್ತೈದು ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಶ್ರೀಪಂಚಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಮಾರ್ಚ್-31, 2022 ರಂದು ನಿವೃತ್ತರಾಗಿ ಹಿರಿಯೂರು ನಗರದಲ್ಲಿ ನೆಲೆಸಿದ್ದಾರೆ.

ಹವ್ಯಾಸಿ ಪತ್ರಕರ್ತರು, ಕ್ರೀಡೆ, ಪ್ರವಾಸ, ಛಾಯಾಗ್ರಹಣ, ಓದು ಇವರ ಆಸಕ್ತಿಗಳು. ಇವರ ಕೆಲವು ಬಿಡಿ ಲೇಖನಗಳು ದಿನ ಪತ್ರಿಕೆ, ಸ್ಮರಣಸಂಚಿಕೆ, ವಿಶೇಷ ಪುರವಣಿಗಳಲ್ಲಿ ಪ್ರಕಟವಾಗಿವೆ.
ಅನೇಕ ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಕೇಂದ್ರದಿಂದ ರಾಜ್ಯಮಟ್ಟದ  ದಿನಪತ್ರಿಕೆಗೆ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಹಿರಿಯೂರು ಸೀಮೆ ಜಾನಪದಎಂಬ ಇವರ ಬಿಡಿ ಲೇಖನಗಳ ಸಂಗ್ರಹ ಕೃತಿಯನ್ನು 2014ರಲ್ಲಿ ಸಿವಿಜಿ ಇಂಡಿಯಾ ಪ್ರಕಟಿಸಿದೆ.

 ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್‘ (ಸಿವಿಜಿ ಪಬ್ಲಿಕೇಶನ್ಸ್ ಬೆಂಗಳೂರು-2020), ‘ಮಾರಿಕಣಿವೆ‘- ವಾಣಿವಿಲಾಸ ಸಾಗರ ನಿರ್ಮಾಣದ ಕತೆ (ತೇಜಸ್ ಇಂಡಿಯಾ ಬೆಂಗಳೂರು-2021) ಹಾಗೂ ತುಮಕೂರು ಜಿಲ್ಲೆಯಲ್ಲಿ ಬುಕಾನನ್‘ (ಸಿವಿಜಿ ಪಬ್ಲಿಕೇಶನ್ಸ್ ಬೆಂಗಳೂರು-2022) ಎಂಬ ಅನುವಾದಿತ ಕೃತಿಗಳು, ‘ ನೆಲದ ಸಂಕಥನ ‘(ಸಿವಿಜಿ ಇಂಡಿಯಾ ಬೆಂಗಳೂರು-2023), ‘ದುರುಗ ಸೀಮೆ ಸಾಧಕರು‘(ದೇವರ ಮನೆ ಟ್ರಸ್ಟ್, ಬೆಂಗಳೂರು-2023) ಪ್ರಕಟವಾಗಿವೆ.
ಡಾಬ್ಸ್ ಆಡಳಿತದ ನೋಟಗಳು‘(2024) ಇವರ ನಾಲ್ಕನೆಯ ಅನುವಾದಿತ ಕೃತಿ.  ಬೆಂಗಳೂರು ಸೀಮೆಯಲ್ಲಿ ಬುಕಾನನ್ಎಂಬ ಕೃತಿ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಆಗಲಿದೆ.

ಚಂದನ ದೂರದರ್ಶನ- ಶುಭೋದಯ ಕರ್ನಾಟಕ (6.5.2024)ದಲ್ಲಿ ಇವರ ನೇರ ಸಂದರ್ಶನ ಪ್ರಸಾರವಾಗಿದೆ. *ಜೂನ್ 2024ರಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರದಿಂದ ಸರ್ವೇಕ್ಷಣಾಧಿಕಾರಿ ಹಾಗೂ ಫಿಜೀಷಿಯನ್ ಡಾ.ಫ್ರಾನ್ಸಿಸ್ ಬುಕಾನನ್, ಮಾರಿಕಣಿವೆ ಜಲಾಶಯದ ನೀಲನಕ್ಷೆ ರಚಿಸಿದ ಎಂಜಿನಿಯರ್ ಹೆಚ್.ಡಿ.ರೈಸ್ ಮತ್ತು ಚಿತ್ರದುರ್ಗ ವಿಭಾಗದ ಪ್ರಥಮ ಸೂಪರಿಂಟೆಂಡೆಂಟ್ (ಜಿಲ್ಲಾಧಿಕಾರಿ) ರಿಚರ್ಡ್ ಸ್ಟೀವರ್ಟ್ ಡಾರ್ಬ್ಸ್ (ಆರ್.ಎಸ್.ಡಾಬ್ಸ್) ರ ಸಾಧನೆ ಕುರಿತು ಸರಣಿ ರೇಡಿಯೋ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದ್ದಾರೆ.

ಇವರ ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ಕೃತಿಯ ಆಯ್ದ ಅಧ್ಯಾಯಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಬಿ.ಕಾಂ ಮತ್ತು ಬಿ.ಬಿ.ಎ. ಪದವಿ ತರಗತಿಯ ಮೂರನೇ ಸೆಮಿಸ್ಟರ್ ನ ಕನ್ನಡ ಪಠ್ಯ ಪುಸ್ತಕದಲ್ಲಿ 2025ರಲ್ಲಿ ಬಳಸಿಕೊಂಡಿದೆ.

2025ರಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಹತ್ವದ ಯೋಜನೆಯಾದ ದಿ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್ಸ್ಸಂಪುಟಗಳ (ಇಂಗ್ಲಿಷ್ ನಿಂದ ಕನ್ನಡ) ಅನುವಾದ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2024) ಸಂದಿದೆ.

 

 

Share This Article
error: Content is protected !!
";