ಚಂದ್ರವಳ್ಳಿ ನ್ಯೂಸ್, ದೇವನಹಳ್ಳಿ:
ಮಹಿಳೆಯೊಬ್ಬಳು ಪ್ರೀತಿಸುವ ನಾಟಕವಾಡಿ ಮದುವೆಯಾಗಿ ಮೂವರನ್ನು ವಂಚಿಸಿರುವುದು ಬಯಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದಲ್ಲಿ ಜರುಗಿದೆ.
ವಂಚಕಿ ಸುಧಾರಾಣಿ ಪ್ರೀತಿಸಿ ಮದುವೆಯಾಗಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದ್ದು ಇದೀಗ ಆಕೆಯ ಮೋಸದಾಟದ ಬಗ್ಗೆ ಎರಡನೇ ಗಂಡ ಮಾಧ್ಯಮದ ಎದುರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮೊದಲ ಪತಿ ತೀರಿಕೊಂಡಿದ್ದಾರೆ ಎಂದು ಸುಳ್ಳು ಹೇಳಿ ಸುಧಾರಾಣಿ ತನ್ನನ್ನು ಮದುವೆಯಾಗಿದ್ದಾರೆ. ಮದುವೆಯ ನಂತರ ಸುಮಾರು 25 ಲಕ್ಷ ರೂ. ಹಣವನ್ನು ತೆಗೆದುಕೊಂಡಿದ್ದಾಳೆ. ನಂತರ, ಸುಧಾರಾಣಿಗೆ ಮೊದಲ ಪತಿ ಹೀರೇಗೌಡ ಬದುಕಿರುವ ವಿಚಾರ ಬೆಳಕಿಗೆ ಬಂದಿದೆ.
ಇದಲ್ಲದೆ ಸುಧಾರಾಣಿ ಹೈದರಾಬಾದ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ, ಬೆಂಗಳೂರಿನಲ್ಲಿ ಶಿವಗೌಡ ಎಂಬುವವರನ್ನು ಮೂರನೇ ಮದುವೆಯಾಗಿರುವುದೂ ನಂತರ ಗೊತ್ತಾಯಿತು ಎಂದು ತಿಳಿಸಿರುವ ಸಂತ್ರಸ್ತ 2ನೇ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

