ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಕ್ಕಳಾಟ, ಆಕಸ್ಮಿಕ, ಅಮಾಯಕರು ಎಂದು ಈ ಹಿಂದೆ ನಡೆದ ವಿಧ್ವಂಸಕ ಕೃತ್ಯಗಳಿಗೆಲ್ಲಾ ತೇಪೆ ಹಚ್ಚಿದ್ದ ಗೊತ್ತಿಲ್ಲ ಅಲಿಯಾಸ್ಆಕಸ್ಮಿಕ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಈಗ ಮೈಸೂರಿನಲ್ಲಿ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ ಡ್ರಗ್ಫ್ಯಾಕ್ಟರಿಯನ್ನು ಫಿನಾಯಿಲ್ಅಂಗಡಿ ಎಂದು ತೇಪೆ ಹಚ್ಚುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಪರಮೇಶ್ವರ್ಅವರೇ, ತನಿಖಾಧಿಕಾರಿಗಳು ವರದಿ ಸಲ್ಲಿಸುವ ಮುನ್ನವೇ ನೀವು ಈ ರೀತಿ ತೀರ್ಪು ನೀಡುತ್ತಿರುವುದನ್ನು ನೋಡಿದರೆ, ಈ ಡ್ರಗ್ಸ್ದಂಧೆಯ ಹಿಂದೆ ಕಾಣದ ‘ಕೈ‘ಗಳಿರುವುದು ಖಚಿತ-ನಿಶ್ಚಿತ-ಖಂಡಿತ!! ಎಂದು ಬಿಜೆಪಿ ಆರೋಪಿಸಿದೆ.

