ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಾಲೆಯ 1990-91ನೇ ಸಾಲಿನ 35 ವರ್ಷಗಳ ನಂತರದ ಸಹಪಾಠಿ ವಿದ್ಯಾರ್ಥಿಗಳ ಪುನರ್ಮಿಲನ-ಗೆಳೆತನ ಗಂಗೋತ್ರಿ ಕಾರ್ಯಕ್ರಮವನ್ನು ಇದೇ ಫೆ.01ರಂದು ಬೆಳಿಗ್ಗೆ 10ಕ್ಕೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಬ್ಯಾಚಿನರಾದ ನಾಗರಾಜ್ ಬೆಳಗಟ್ಟ, ಡಾ.ಬಿ.ಎಂ.ಗುರುನಾಥ, ಲೇಪಾಕ್ಷಿ, ಪ್ರಸನ್ನ, ಎಸ್.ವೇದಾವತಿ, ಮೈತ್ರಾ, ಆಶಾ, ಪದ್ಮ, ಪಿ.ಎಲ್.ವೆಂಕಟೇಶ್ ರೆಡ್ಡಿ, ಬಿ.ರವಿಶಂಕರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ಡಿ.ಎಲ್.ತಿಮ್ಮರೆಡ್ಡಿ, ಎ.ಎನ್.ರಾಜಶೇಖರ್, ಜಿಯಾವುಲ್ಲಾ, ರಾಜತ್ವುಲ್ಲಾ ಅವರನ್ನು ಅಭಿನಂದಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಫೋಟೋ ವಿವರ: ಬೆಳಗಟ್ಟ ಗ್ರಾಮದ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯ 1990-91ನೇ ಸಾಲಿನ ಎಸ್ಎಸ್ಎಲ್ಸಿ ಬ್ಯಾಚ್

