ರಾಜ್ಯದ 2 ರೈಲು ಸೇರಿ 7 ಹೈಸ್ಪೀಡ್ ರೈಲು ಕಾರಿಡಾರ್​

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ನವ ದೆಹಲಿ:
2026-27
ರ ಸಾಲಿನ ಕೇಂದ್ರ ಬಜೆಟ್​ ಮಂಡನೆಯಲ್ಲಿ ದೇಶಕ್ಕೆ 7 ಹೈಸ್ಪೀಡ್ ರೈಲು ಕಾರಿಡಾರ್​ಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಅವರು ಪ್ರಸ್ತಾಪಿಸಿದ್ದಾರೆ.
ಬೃಹತ್ ನಗರಗಳ ನಡುವೆ
7 ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಬೆಳವಣಿಗೆಯ ಸಂಪರ್ಕಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ.

ಇದರಲ್ಲಿ ಮುಂಬೈ-ಪುಣೆ, ಹೈದರಾಬಾದ್-ಪುಣೆ, ಹೈದರಾಬಾದ್ – ಬೆಂಗಳೂರು, ಚೆನ್ನೈ- ಬೆಂಗಳೂರು, ದೆಹಲಿ – ವಾರಣಾಸಿ, ವಾರಣಾಸಿ – ಸಿಲಿಗುರಿ ಸೇರಿವೆ. ಪ್ರಮುಖ ಆರ್ಥಿಕ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸುವ ಯೋಜನೆ ಇದಾಗಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.

- Advertisement - 

ನಿರ್ಮಲಾ ಸೀತಾರಾಮನ್‌ಅವರು ಹೈಸ್ಪೀಡ್ ರೈಲುಗಳ ಬಗ್ಗೆ ಪ್ರಸ್ತಾಪಿಸುತ್ತಾ, ಪ್ರಸ್ತಾವಿತ ಈ ಕಾರಿಡಾರ್‌ಗಳು ದೇಶದ ಕೆಲವು ಪ್ರಮುಖ ಆರ್ಥಿಕ, ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸುತ್ತವೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು, ಲಾಜಿಸ್ಟಿಕ್ಸ್ ದಕ್ಷತೆ ಸುಧಾರಿಸಲು ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಈ ಏಳು ಕಾರಿಡಾರ್‌ಗಳನ್ನು ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಭಾರತದಾದ್ಯಂತ ಸಂಪರ್ಕ ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ತಂತ್ರಜ್ಞಾನ ಕೇಂದ್ರಗಳನ್ನು ಉತ್ಪಾದನಾ ಕೇಂದ್ರಗಳು ಮತ್ತು ಪ್ರಮುಖ ಜನಸಂಖ್ಯಾ ಸಮೂಹಗಳೊಂದಿಗೆ ಸಂಪರ್ಕಿಸುತ್ತದೆ. ಪ್ರಮುಖ ನಗರಗಳನ್ನು ಜೋಡಿಸುವ ಉದ್ದೇಶದಿಂದ ಈ ಏಳು ಹೈಸ್ಪೀಡ್ ರೈಲು ಯೋಜನೆ ಘೋಷಿಸಲಾಗಿದೆ. ಈ ಯೋಜನೆ ಮೂಲಕ ಪ್ರಮುಖ ಮಾರ್ಗಗಳ ಪ್ರಯಾಣ ಸಮಯ ಕಡಿಮೆ ಮಾಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

- Advertisement - 

ಮೊದಲ ಬಜೆಟ್:
ಕೇಂದ್ರದ ಕರ್ತವ್ಯ ಭವನದಲ್ಲಿ ಸಿದ್ದಗೊಂಡ ಮೊಟ್ಟ ಮೊದಲ ಬಜೆಟ್ ಇದಾಗಿದ್ದು
, ನಮ್ಮ ಕರ್ತವ್ಯಕ್ಕೆ ಈ ಭವನ ಪ್ರೇರಣೆ ನೀಡಿದೆ. 2026 ಬಜೆಟ್ ಯುವಶಕ್ತಿಯ ಬಜೆಟ್ ಆಗಿದೆ. ಜನಸೇವೆಯನ್ನೇ ಕರ್ತವ್ಯ ಎಂದು ತಿಳಿದು ಈ ಬಜೆಟ್ ಸಿದ್ದಪಡಿಸಿದ್ದೇವೆ. ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ ಭಾರತದ ಆರ್ಥಿಕ ಪಥವು ಸ್ಥಿರತೆಯಿಂದ ಗುರುತಿಸಲ್ಪಟ್ಟಿದೆ. ಹಾಗಾಗಿ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಉಳಿಸಿಕೊಳ್ಳಲು ಕೇಂದ್ರ ಬದ್ಧವಾಗಿದೆ ಎಂದು ವಿತ್ತ ಸಚಿವರು ಹೇಳಿದರು.

ಪ್ರಮುಖ ಮೂರು ಕರ್ತವ್ಯಗಳು:
ಕರ್ತವ್ಯ ಭವನದಲ್ಲಿ ರಚಿಸಿದ ಮೊದಲ ಬಜೆಟ್‌ನಲ್ಲಿ ಮೂರು ಕರ್ತವ್ಯಕ್ಕೆ ಆದ್ಯತೆ ನೀಡಲಾಗುವುದು ಎಂದ ವಿತ್ತ ಸಚಿವೆ ಹೇಳಿ
, ಮೊದಲನೆಯದು ಸ್ಪರ್ಧಾತ್ಮಕತೆ ಹೆಚ್ಚಿಸುವ ಮೂಲಕ ಮತ್ತು ಅಸ್ಥಿರ ಜಾಗತಿಕ ಚಲನಶೀಲತೆಗೆ ಸ್ಥಿತಿಸ್ಥಾಪಕತ್ವ ನಿರ್ಮಿಸಿ ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವ ನಿರ್ಧಾರ ಮಾಡಲಾಗಿದೆ.

2ನೇ ಕರ್ತವ್ಯ ಎಂದರೆ, ಜನರ ಆಕಾಂಕ್ಷೆ ಈಡೇರಿಸುವುದು ಮತ್ತು ಅವರ ಸಾಮರ್ಥ್ಯ ಬೆಳೆಸುವುದು ಮತ್ತು ಭಾರತದ ಸಮೃದ್ಧಿಯ ಹಾದಿಯಲ್ಲಿ ಅವುಗಳನ್ನು ಬಲವಾದ ಪಾಲುದಾರರನ್ನಾಗಿ ಮಾಡುವುದು ನಮ್ಮ ಎರಡನೆಯ ಕರ್ತವ್ಯವಾಗಿದೆ.

ಮೂರನೇ ಕರ್ತವ್ಯವೆಂದರೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ಹಿನ್ನೆಲೆಯಲ್ಲಿ ಯೋಜನೆಗಳ ಜಾರಿ ಮಾಡಲಾಗುವುದು. ಈ ಮೂಲಕ ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶವು ಸಂಪನ್ಮೂಲಗಳು, ಸೌಲಭ್ಯಗಳು ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಗೆ ಅವಕಾಶಗಳನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ ಎಂದು ವಿತ್ತ ಸಚಿವರು ಹೇಳಿದರು.

 

Share This Article
error: Content is protected !!
";