ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ ಛಲವಾದಿ ಸಮುದಾಯ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ಸರಕಾರದ ಗಮನಕ್ಕೆ ತರುವ ಮೂಲಕ ಅದನ್ನು ಪರಿಹರಿಸಿ, ಸಮುದಾಯದ ಅಭಿವೃದ್ದಿಗೆ ಕೆಲಸ ಮಾಡೋಣ ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ನರೇಶ್ ತಿಳಿಸಿದರು.
ದೊಡ್ಡಬಳ್ಳಾಪುರದ ಪ್ರವಾಸಿಮಂದಿರಲ್ಲಿ ಛಲವಾದಿ ಮಹಾಸಭಾ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬೇರೆ ಅನೇಕ ಸಮುದಾಯಗಳ ಅಭಿವೃದ್ದಿಗಾಗಿ ನಿಗಮ ಮಂಡಳಿಗಳಿವೆ. ಆದರೆ ನಮ್ಮ ಸಮುದಾಯಕ್ಕಿಲ್ಲ. ನಮ್ಮಲ್ಲಿ ಭಿನ್ನಾಭಿಪ್ರಾಯ ಇದ್ದರೂ ಕೂಡ ಎಲ್ಲರೂ ಒಟ್ಟಿಗೆ ಇರಬೇಕು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ೪ ತಾಲೂಕುಗಳಿಂದ ಅರ್ಜಿ ಬಂದಿತ್ತು.ನನ್ನನ್ನ ಆಯ್ಕೆ ಮಾಡಿದ್ದಾಗಿ ಧನ್ಯವಾದಗಳು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಮಾಡಲಾಗುತ್ತದೆ.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಗಳನ್ನು ಸಮುದಾಯ ಎದುರಿಸಲಾಗುತ್ತಿದೆ. ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮಲ್ಲಿ ಮುಖ್ಯಮಂತ್ರಿ ಆಗುವ ಸಾಮರ್ಥ್ಯ ವಿದೆ. ಆದರೂ ರಾಜಕೀಯ ,ಶೈಕ್ಷಣಿಕ,ಸಾಮಾಜಿಕವಾಗಿ ಹಿನ್ನಡೆಯಾಗಿದೆ. ಸಮುದಾಯದ ಅಭಿವೃದ್ದಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.
ಸಮುದಾಯದ ಮುಖಂಡ ತಿಮ್ಮರಾಯಪ್ಪ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೮-೧೦ ವರ್ಷದಿಂದ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರ ಹುದ್ದೆ ಖಾಲಿ ಇತ್ತು. ತಾಲೂಕು ಮಟ್ಟದ ಪದಾಧಿಕಾರಿಗಳೇ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸಮಿತಿಯೂ ತಾಲೂಕು ಪದಾಧಿಕಾರಿಗಳಿಂದ ಅರ್ಜಿ ಪಡೆದು, ಜ.೨೪ ರಂದು ಸಮುದಾಯದ ಮುಖಂಡ ನೇತ್ರತ್ವದಲ್ಲಿ ನರೇಶ್ ಅವರನ್ನು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದರು.
ಅವರು ೪ ತಾಲೂಕಿನ ಸಮುದಾಯ ಮುಖಂಡರ ಭೇಟಿ ಮಾಡಿ, ತಾಲೂಕಿನ ಪದಾಧಿಕಾರಿಗಳ ಆಯ್ಕೆ ಮಾಡಬೇಕು. ಅಧ್ಯಕ್ಷರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು. ಛಲವಾದಿ ಮಹಾಸಭಾ ಜತೆಗೆ ಕರ್ನಾಟಕ ಛಲವಾದಿ ಮಹಾ ಸಭಾ ವಿಲೀನ ಮಾಡಲು ತೀರ್ಮಾನಿಸಲಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು ಎಂದರು.
ಈ ವೇಳೆಯಲ್ಲಿ ಮುಖಂಡರಾದ ಗೂಳ್ಯ ಹನುಮಣ್ಣ, ರಾಜಶೇಖರ್, ನಾರಾಯಣ, ಮರಿಯಪ್ಪಣ್ಣ, ತಿಮ್ಮರಾಯಪ್ಪ, ಮದ್ದೂರಣ್ಣ, ಸುರೇಶ್ ನಾರಾಯಣ, ಅಜಯ್, ರಾಮಣ್ಣ ಸೇರಿದಂತೆ ಅನೇಕರು ಹಾಜರಿದ್ದರು.

