ಯೋಗಾಸನ ಲೀಗ್ ಸ್ಪರ್ಧೆಯಲ್ಲಿ ನಿಸರ್ಗ ಯೋಗಾಕೇಂದ್ರಕ್ಕೆ ತಂಡ ಪ್ರಶಸ್ತಿ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿ ನಡೆದ ನಾಲ್ಕನೇ ಕರ್ನಾಟಕ ರಾಜ್ಯ ಯೋಗಾಸನ ಲೀಗ್ 2026 ರ ಸ್ಪರ್ಧೆಯಲ್ಲಿ ಭಾಗವಹಿಸಿ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ರವರಿಂದ ತಂಡ ಪ್ರಶಸ್ತಿಯನ್ನು ಸ್ವೀಕರಿಸಿ ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದಿದ್ದಾರೆ.

       ತಂಡ ಪ್ರಶಸ್ತಿಯನ್ನು ಗೆದ್ದ ಯೋಗ ತಂಡವನ್ನು ಕರ್ನಾಟಕ ಸ್ಟೇಟ್ ಅಮೆಚ್ಯುರ್ ಯೋಗ ಸ್ಪೋರ್ಟ್ಸ್ ನ ಗೌರವ ಕಾರ್ಯದರ್ಶಿ ಎ. ನಟರಾಜ್ (ಯೋಗ ), ಬೆಂಗಳೂರು ಗ್ರಾಮಾಂತರ ಜಿಲ್ಲಾ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊಫೆಸರ್ ಎಂ. ಜಿ. ಅಮರನಾಥ್, ಖಜಾಂಚಿ ಕೆ. ಆರ್. ಶ್ಯಾಮಸುಂದರ್, ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು, ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";