ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ಬೀಗ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದಲ್ಲಿ ವಿವಿಧ ಪೇಯಿಂಗ್ ಗೆಸ್ಟ್ ಅಥವಾ ವಸತಿ ಗೃಹಗಳು ಮೂಲಭೂತ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಅಸುರಕ್ಷಿತ ಪಿಜಿಗಳ ವಿರುದ್ಧ ಕಟ್ಟುನಿಟ್ಟಿನ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

8 ಪಿಜಿಗಳಿಗೆ ಬೀಗ!:
ಬೆಂಗಳೂರಿನ ಶಾಂತಿನಗರ, ಸಿ.ವಿ.ರಾಮನ್‌ ನಗರ, ಗಾಂಧಿನಗರ, ಶಿವಾಜಿ ನಗರ, ಚಾಮರಾಜಪೇಟೆ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪಿಜಿಗಳಲ್ಲಿ ತಪಾಸಣೆ ನಡೆಸಿದ ಆರೋಗ್ಯಾಧಿಕಾರಿಗಳು 574 ಪಿಜಿಗಳಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

- Advertisement - 

ಅಡುಗೆ ಕೋಣೆ ಶುಚಿತ್ವ, ಶುದ್ಧ ಕುಡಿಯುವ ನೀರು, ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದ 8 ಪಿಜಿಗಳಿಗೆ ಈಗಾಗಲೇ ಬೀಗ ಹಾಕಲಾಗಿದ್ದು, ಇತರೆ ನಿಯಮ ಉಲ್ಲಂಘನೆಗಳಿಗೆ ಒಟ್ಟು 3.09 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪಿಜಿ ಮಾಲೀಕರಿಗೆ ವಾರ್ನಿಂಗ್:
ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ
, ಪಿಜಿಗಳ ಮೇಲೆ ಏಕಾಏಕಿ ತಪಾಸಣೆ ಮಾಡುತ್ತಿದ್ದು ಇದರಿಂದ ಪಿಜಿ ಮಾಲೀಕರು ಕಳವಳಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

- Advertisement - 

ವಿಲ್ಸನ್ ಗಾರ್ಡನ್‌ನ ಪಿಜಿ ಮಾಲೀಕ ಶರಣೇಶ್ ಪ್ರತಿಕ್ರಿಯಿಸಿ, ನಿಯಮ ಪಾಲನೆ ಜೊತೆಗೆ ಅಧಿಕಾರಿಗಳಿಗೆ ಸಹಕರಿಸುವುದು ನಮ್ಮ ಜವಾಬ್ದಾರಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಪರಿಶೀಲನೆಗೆ ಒಳಪಟ್ಟ ಎಲ್ಲಾ ಪಿಜಿಗಳಿಗೆ ಎಚ್ಚರಿಕೆ ನೀಡಲಾಗಿದ್ದು
, ನ್ಯೂನ್ಯತೆ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪಿಜಿಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

 

Share This Article
error: Content is protected !!
";